UNIVERSAL LIBRARY ಲು

೦ಟ_20017

AudVudI1 IVSHAINN

OUP—552—7-7-66-—10,000 OSMANIA UNIVERSITY LIBRARY Call No. KG ಪಿ Accession No. K- 3 ೦4 (43ರ Author

Title ಜೋರ್ಕನಂ೦ಯ, ಷಾ ೀಲ್‌

This book should be returned on or before the date

last marked below.

ಉಷಾ ಸಾಹಿತ್ಯ ಮಾಲೆ: ೩೦

ಜೋಕಾಲಿಯ ಮೇಲೆ

ಮೂಲ ಲೇಖಕಿಯರು ಮಾಲತಿಬಾಯಿ ಬೇಜೇಕರ್‌

ಅನುವಾದಕರು ಡಿ. ಎಸ್‌. ಕುಲಕರ್ಣಿ

ಉಷಾ ಸಾಹಿತ್ಯ ಮಾಲೆ ಮೈಸೂರು

ಮೊದಲ ಮುದ್ರಣ : ೧೯೫೧ ಮಾಲೆಯ ಐದನೆಯ ವಗುಷದ ಕೊನೆಯ ಸಂಚಿಕೆ ಮಾಲೆಯ ೧೯೫೧ ಆಗಸ್ಟ್‌ ಸಂಚಿಕೆ

(ಎಲ್ಲ ಹಕ್ಕುಗಳನ್ನು ಕಾದಿರಿಸಿದೆ)

ಜೆಲೆ: ೨-೮-೦

ಮುದ್ರಕರು ಮತ್ತು ಪ್ರಕಾಶಕರು

ಆರ್‌. ಎನ್‌. ಹಬ್ಬು ಉಷಾ ಪ್ರೆಸ್‌, ಮೈಸೂರು

ನಿಭಾವರೀ ವಾಜ್ಮಯ ಕುರಿತು

೧೯೩೩ರಲ್ಲಿ " ಕಳ್ಳಾಂಜೆ ನಿಶ್ವಾಸ'ವೆಂಬ ಪುಟ್ಟ ಲಲಿತಕೃತಿಯೊಂದು " ವಿಭಾವರೀ ಶಿರೂರಕರ, ಬಿ.ಎ.' ಎಂಬ ಅಂಕಿತದೊಡನೆ ಪ್ರಕಟವಾದಾಗ, ಮಹಾರಾಷ್ಟ್ರದ ವಿಮರ್ಶಾ ವಾಜ್ಮಯದಲ್ಲಿ ರಸಿಕ ವಾಚಕರನೇಕರ ಎದೆ ಗಡಲಿನಲ್ಲಿ ಒಂದು ಬಿರುಗಾಳಿ ಬೀಸಿದಂತಾಯಿತು. " ಮೊಗ್ಗೆಗಳ ನಿಟ್ಟು ಸಿರು” ಎಂಬರ್ಥದ್ದು ಪುಸ್ತಕದ ಹೆಸರು. ಆದರೆ ಬರೆದವರೊ? « ವಿಭಾವರೀ ಶಿರೂರಕರೆ, ಬಿ.ಎ.' ಯಾರಿವರು ವಿಭಾವರೀ ಶಿರೂರಕರ?.-. ಎಲ್ಲರೊ ಒಬ್ಬರೊನ್ನೊಬ್ಬರು ಕೇಳುವವರೇ ಆದರೆ ಯಾರಿಂದಲೂ ಪ್ರಶ್ನೆಗೆ ಸರಿಯಾದ ಉತ್ತರವೇ ದೊರೆಯದು. ಅದಾವುದೋ ಮೂಲೆ ಯಲ್ಲಿದ್ದು ಕೊಂಡು ಇಷ್ಟು ಸರಸವಾಗಿ ಬರೆದು ಎಲ್ಲರ ಮನವನ್ನು ಸೂರೆ ಗೊಳ್ಳುವ ವ್ಯಕ್ತಿಯದಾವದೆಂಬ ಬಗ್ಗೆ ಉಂಟಾಗಿದ್ದ ಕುತೂಹಲ, ಮುಂದೆ ಒಂದರೆ ಹಿಂದೊಂದರಂತೆ " ಹಿಂದೋಳ್ಯಾವರ' (ಜೋಕಾಲಿಯ ಮೇಲೆ ೧೯೩೪), " ವಿರಲೇಲೆ ಸ್ವಸ್ನ' (ಕಾಣದಾದ ಕನಸುಗಳು, ೧೯೩೫) ಎಂಬೆರಡು ಪುಸ್ತಕಗಳೂ ಅದೇ ಹೆಸರಿನಲ್ಲಿ ಪ್ರಕಟವಾದ ಮೇಲಂತೂ ಉತ್ಸಾಹದ ಹುಚ್ಚು ಹೊಳೆಯಾಗಿ ಹರಿಯಿತು. ಶರ್ಕ ವಿತರ್ಕಗಳಾದವು; ಪುಸ್ತಕ ಗಳ ಲೇಖನ ಶೈಲಿ, ವಿಷಯ ವ್ಯಾಪ್ತಿ, ಜೀವನ ದೃಷ್ಟಿ, ನಿರೊಸಣ ವೈಶಿಷ್ಟ್ಯ ಇವೇ ಮೊದಲಾದ ವಿಮರ್ಶಾ ಶಾಸ್ತ್ರದ ಸಾಧಕ ಬಾಧಕ ಪ್ರಮಾಣಗಳ ಕತ್ತಿ-ವರಸೆಯಾಟವಾಡಿ, ಹಲವರ ಕೊರಳಿಗೆ ಹೆಸರಿನ ಮಾಲೆ ಹಾಕುವ ಪ್ರಯತ್ನಗಳೂ ನಡೆದವು. ಮಹಾರಾಷ್ಟ್ರದ ಸುಮಾರು ೬-೭ ಪ್ರೀ ಪುರುಷರ ಲೇಖಕರು ಅನಾಮಿಕ ಕೀರ್ತಿಯ ಇಡುಗಂಟಿಗೆ ಒಡೆಯರಾಗುವಂತಾ ಯಿತು. ಆದರೂ ಹೆಸರಿನ ಛದ್ಮವೇಷದ ಕಗ್ಗಂಟು ಇನ್ನೂ ಒಡೆಯದೇ ಇತ್ತು,

ಮೊನ್ನೆ ಮೊನ್ನೆ ೧೯೫೦ರಲ್ಲಿ ಅವರ "ಬಳೀ? (ಬಲಿ) ಎಂಬ ಮತ್ತೊಂದು ಕಾದಂಬರಿ ಪ್ರಕಟವಾದಾಗ ಅವರ ಕೀರ್ತಿ ಶಿಖರಕ್ಕೆ ಮುಟ್ಟಿತು. ಮಧ್ಯೆ ೧೦-೧೨ ವರುಷಗಳಲ್ಲಿ ಹೆಸರಿನಲ್ಲಿ ಯಾವ ಬದ

4

ಲಾವಣೆಯೂ ಬಂದಿರಲಿಲ್ಲವಾದ್ದರಿಂದ ಕಣ್ಮರೆಯಾಗುತ್ತಲಿದ್ದ ಹೆಸರಿನ ವಾದವು, ಕೆಲವೇ ದಿನಗಳ ಹಿಂದೆ ಬಂದ "ಸಾಖರೆ ಪುಡಾ' ಎಂಬ ಮರಾಠೀ ಚಲಚ್ಛಿತ್ರದ ಕಥಾ ಲೇಖಕಿಯರು ಇವರೇ ಎಂದಾಗ್ಯ ಮತ್ತೆ ಮುಂದೆ ಬಂದಿತು, ಆದರೆ ಹೊತ್ತಿಗಾಗಲೆ " ವಿಭಾವರೀ ಶಿರೂರಕರ' ಎಂದರೆ ಪುಣೆಯ ಹೆಸರುವೆತ್ತ ರೇಖಕಿಯರಾದ ಸೌ. ಮಾಲಕೀಬಾಯಿಾ ಬೇಡೇಕರ (ಪೂರ್ವಾಶ್ರಮದ ಬಾಳೂಶಾಯಿಸಾ ಖರೆ) ಸುಪ್ರಸಿದ್ಧ ಮರಾಠೀ ಚಲ ಚೈತ್ರ ನಿರ್ಮಾಪಕರೂ ದಿಗ್ವರ್ಶಕರೂ ಆದ ಶ್ರೀ ವಿಶ್ರಾಮ ಬೇಡೇಕರ ಅವರ ಪಶ್ನಿಯರೆಂಬುದು ಅನೇಕರಿಗೆ ಆಗಲೇ ತಿಳಿದಿದ್ದಿ ತು.

ಹೋದ ವರ್ಷವೇ ಅವರೆ ಗುಪ್ತನಾಮದ ವಿಷಯವಾಗಿಯೂ, ಮತ್ತು ಅವರ ಬರನಣಿಗೆಯ ಕುರಿತೂ ಕಾಲಕಾಲಕ್ಕೆ ನೆಡೆದ ಚರ್ಚೆ, ಉಹಃಪೋಹೆ, ಮತ್ತೆ ಬೇರೆ ವಿಮರ್ಶಾತ್ಮಕ ಲೇಖನ ಇವುಗಳ ಸಂಕಲನಾ ತ್ಮಕ ಹೊತ್ತಿಗೆಯೊಂದು " ವಿಭಾವರೀಚೆ ಟೀಕಾಕಾರ' (ವಿಭಾವರಿಯ ಟೀಕಾಕಾರರು) ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅವರ ಪುಸ್ತಕಗಳ ಕುರಿತು ಶಾಲೆ, ಕಾಲೇಜು, ಮತ್ತಿತರ ಸಾಹಿತ್ಯ ಸಭೆಗಳಲ್ಲಿ ನಡೆದ ಚರ್ಚೆ, ಬೇಕೆ ಬೇಕಿ ಹಕ್ಕ ಡೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾದ ಮಿಮರ್ಶಾತ್ಮಕ ಲೇಖನೆ ಮುಂತಾದ ಎಲ್ಲ ಸಾಮಗ್ರಿ ಕೈಗೆ ಡೊರಿಯುವುದು ಸಾಧ್ಯವಿಲ್ಲ ದಿದ್ದರೂ, ಕೈಗೆ ದೊರಿಶುದಷ್ಟೇ, ತಾವು ಪ್ರಕಟಿಸಿದ ಪುಸ್ತಕದಾಕಾರದ ೨೦೦೦ ಪುಟಗಳಷ್ಟಾಗಬಹುದೆಂದ್ಕು, ಗ್ರಂಥದ ಸಂಪಾದಕರು ತಮ್ಮ ಮಾತಿನಲ್ಲಿ ಹೇಳಿದ್ದಾರೆ. ಎರಡು, ಎರಡೂವರೆನೂರು ಪುಟಗಳ ಪುಸ್ತಕ ದಲ್ಲಿ ಅವರ ಪ್ರತಿಭೆಯನ್ನು ವೆ.ಚ್ಚಿ ಹೊಗಳಿದವರಲ್ಲಿ ಮಹಾರಾಷ್ಟ್ರದ ಅನೇಕ ನಾಮಾಂಕಿತ ವಾಜ್ಮಯ ವಿಶಾರದರಿದ್ದಾರೆ ; ಅವರ ಜೀವನ ದೃಷ್ಟಿಯನ್ನು ತೆಗಳಿದವರೊ ಇದ್ದಾರೆ; ಅವರ ಗುಪ್ತ ನಾಮವನ್ನು ಡಂಭಾಚಾರದ ಸಾಧನೆ ವೆಂದು ಜರೆದವರೂ ಇದ್ದುರೆ, ಆದರೆ ಸ್ತ್ರೀಯೊಬ್ಬಳ ಲೇಖನದ ಕುರಿತು ಸ್ವತಂತ್ರ ಗ್ರಂಥ ನಿರ್ಮಿತಿಯಾಗುವ ಸನ್ಮಾನ ದೊರೆತುದು ಮರಾಠಿಯಲ್ಲಿ ಇನೇ ಮೊದಲು ಸಲವೆಂದು ತೋರುತ್ತದೆ.

ವಿಭಾವರೀ ಶಿರೂರಕರರವರ ಕಥೆ ಕಾದಂಬರಿಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ದೃಷ್ಟಿಕೋನದ ಕುರಿತು ಅಭಿಪ್ರಾಯಭೇದವಾಗಬಹುದಾದರೂ

5

ಅವರೆ ಉನ್ನತ ಪ್ರತಿಭೆಯ ಕುರಿತು, ಅವರೆ ಲೇಖನೆ ಶೈಲಿಯ ವೈಖರಿಯ ಕುರಿತು ಬಹಳಷ್ಟು ಮತಭೇದಗಳಿರಲಾರವು. ಅವರ ಕೃತಿಗಳನ್ನು ಓದಿದ ಯಾರೂ ಅವರ ಶಕ್ತಿಯುತವಾದ ಬರವಣಿಗೆಯನ್ನು ಮೆಚ್ಚಿ ತಲೆದೂಗ ದಿರರು. ೧೦-೧೫ ವರುಷಗಳವರೆಗೆ ಅವರ ವಿಷಯವಾಗಿ ಮಹಾರಾಷ್ಟ್ರ ನಿಮರ್ಶಾ ವಾಜ್ಮಯ ಪ್ರಪಂಚದಲ್ಲಿ ನಡೆದ ಚರ್ಚೆ ಸುಮ್ಮನೆ ನಡೆಯಲಿಲ್ಲ. ಅವರ ಬರವಣಿಗೆ ಕಂಡವರನ್ನು ಕೆಣಕದೆ ಬಿಡಲಿಲ್ಲ. ಆಂಥವರೆಲ್ಲ ತಮ್ಮ ತಮ್ಮ ಪ್ರತಿಕ್ರಿಯಗಳನ್ನು ವ್ಯಕ್ತಪಡಿಸಿದರು. ಅವರು ಒರೆದೆಂಥ ವಿಷಯ ಗಳ ಕುರಿತು ಬರೆದ ಇತರ ಕತೆ ಕಾದಂಬರಿಗಳಿಲ್ಲನೆಂತಲ್ಲ. ಆದರೆ ಅದೇಕೋ ವಿಭಾವರಿಯಷ್ಟು ತನ್ನ ಬರವಣಿಗೆಯಿಂದಾಗಿ ಪ್ರೀತ್ಯಾದರ ಗಳನ್ನು ಅದರಂತೆ ದ್ವೇಷ ತಿರಸ್ಕಾರಗಳನ್ನು ಶಮ್ಮ ಉಡಿಯಲ್ಲಿ ಕಟ್ಟಿ ಕೊಂಡವರಿಲ್ಲ. ಪುಸ್ತಕವನ್ನೋದಿ ಕನ್ನಡ ವಾಚಕರು ತಮ್ಮ ನಿರ್ಣಯಕ್ಕೆ ಬರಬಹುದಾದರೂ, ವರೆಗೆ ಆದ ಪ್ರತಿಕ್ರಿಯೆಗಳ ದೃಷ್ಟಿಯಿಂದ ಒಂದೆ ರಡು ಮಾತುಗಳನ್ನು ಹೇಳಬೇಕೆನ್ಸಿಸುತ್ತದೆ.

« ಕಳ್ಳಾಂಜೆ ನಿಶ್ವಾಸ'ಷ್ರ ಮೊಟ್ಟ ಮೊದಲು ೧೯೩೩ರಲ್ಲಿ ಪ್ರಕಟ ವಾದಾಗ ಮರಾಠೀ ಸಾಹಿತ್ಯ ಪ್ರಪಂಚದಲ್ಲಿ ಹೊಸದೊಂದು ಸಂಜು ಹತ್ತಿ ಉರಿಯಲಾರಂಭಿಸಿತು. ಅಲ್ಲಿಯವರೆಗೆ ಮೂಕಳಾಗಿ ಎಲ್ಲ ದುಃಖಗಳನ್ನು ಬಾಯಿ ಬಿಗಿಹಿಡಿದು ಅನುಭವಿಸಿದ್ದ ಸ್ರೀ ಮೊದಲುಸಲ ತನ್ನ ದುಃಖಗಳನ್ನು ತೆರೆದು ಹಿಡಿದ್ಕು ತಾನೂ ಒಬ್ಬಳು ಮನುಷ್ಯಳು, ತನ್ನ ಸಮಸ್ಯೆಗಳೂ ಇತರ ಸಮಸ್ಯೆಗಳಷ್ಟೇ ಮಹತ್ವದವು. ಅವುಗಳನ್ನು ಸಹಾನುಭೂತಿ ಯಿಂದ ಅರಿತು ನೋಡಿ ಪರಿಹಾರ ಹೇಳಲೇಬೇಕು ಎಂದು ಎಲ್ಲರೆದುರು ಸಾರಲು ಬಂದು ನಿಂತಳು. ವಿಶೇಷವಾಗಿ ಸಲ್ಲಟಸುತ್ತಿದ್ದ ಸಮಾಜ ವ್ಯವಸ್ಥೆ ಯಿಂದಾಗಿ ಮಧ್ಯಮ ವರ್ಗದವರ ಮನೆಗಳಲ್ಲಿದ್ದ ಕನ್ನಿಕೆ ತನ್ನೆಲ್ಲ ಕೌಮಾ ರ್ಯದ ಅಶೆ ಆಕಾಂಕ್ಷೆಗಳನ್ನು ತನ್ನಲ್ಲಿಯೇ ಹುದುಗಿಸಿಟ್ಟುಕೊಂಡು ಜಗತ್ತ ನ್ನೈದುರಿಸಬೇಕಾದ ಪ್ರಸಂಗವುಂಟಾಯಿತು. ಬಾಲ್ಯ ಕಳೆಯುತ್ತಲೇ ಮದುವೆಯಾಟವಾಡಿ ಗಂಡನ ಮನೆಯಲ್ಲಿ ಕಣ್ಮರೆಯಾಗುತ್ತಲಿದ್ದ ಕಾಲ ಅಳಿದುಹೋಯಿತು; ಅಲ್ಲಿಯವರೆಗೆ ನಡೆದುಬಂದಿದ್ದ ಸಾಮಾನ್ಯರ ಜೀವನ ಕ್ರಮದಲ್ಲಿ ನಿಶೇಷ ಸ್ಥಿತ್ಫಂತರಗಳಾದವು. ಮದುವೆಯ ವಯಸ್ಸು

6

ಮುಂದೆ ಬಿದ್ದಿತಲ್ಲಡಿ, ಮದುವೆಯಾಗುವುದೂ ಮೊದಲಿಗಿಂತ ಕಠಿಣ ವಾಯಿತು. ಕೃಷಿ ಪ್ರಧಾನವಾದ ಸಮಾಜ ಜೀವನದಲ್ಲಿ ತಲೆತಲಾಂತರ ದಿಂದ ನಡೆದು ಬಂದಿದ್ದ ಸ್ಥಿರತೆ ಸಟ್ಟಿಣಗಳಲ್ಲಿ ಸಡಲಿಸಿತು. ಸುಶಿಕ್ಷಿತ ಬಿಳಿಯಂಗಿಯವರ ಸಮಾಜಕ್ಕಂತೂ ಇದರ ಇಳ ಮೊದಲಿಗೆ ಶಾಕಿತು. ನಮ್ಮಲ್ಲಿಗಿಂತ ಮಹಾರಾಷ್ಟ್ರದಲ್ಲಿ ಬದಲಾವಣೆಗಳು ಬೇಗ ಕಾಣಿಸಿ ಕೊಂಡವು. ಅಲ್ಲದೆ ಅದರೊಡನೆ ಹೊಸ ಪದ್ಧತಿಯ ಸ್ತ್ರೀ ಶಿಕ್ಷಣಕ್ಕೂ ಆರಂಭವಾಯಿತು. ಸಾಮಾನ್ಯವಾದ ಕೌಮಾರದ ಆಶೆ ಆಕಾಂಕ್ಟೆ ಭಾವನೆ ಗಳೊಡನೆ ಶನ್ನನ್ನು ಶಾನೇ ಇನ್ನೂ ಸರಿಯಾಗಿ ನಿರುಕಿಸಿ ನೋಡಿಕೊಳ್ಳುವ ಪ್ರವೃತ್ತಿಗೆ ಶಿಕ್ಷಣದಿಂದ ಮತ್ತಿಷ್ಟು ಪುಟಕೊಟ್ಟಿಂತಾಯಿತು.

ಹೊಸ ರೀತಿಯ ಸಾಮಾಜಿಕ ಉತ್ಪಾದನೆಯ ವ್ಯವಸ್ಥೆ ಗನುರೂಪವಾಗಿ ಭೂಮಿಯಲ್ಲಿ ದುಡಿದು ತಿನ್ನುವ, ಅಥವಾ ಭೂಮಿಯ ಮೇಲೆಯೇ ಅನಲಂಬಿ ಸಿರುವ ಒಟ್ಟು ಕುಟುಂಬವಿಲ್ಲದಂತಾಗಿ, ಒಂಟಿ ಕುಟುಂಬಗಳ ಬೆಳವಣಿಗೆ ಯಾದಂತೆಲ್ಲ, ಮದುವೆಯ ವಯಸ್ಸು ಮುಂಡೆ ಬೀಳುತ್ತ ನಡೆಯಿತು. ಜನೆ ಜೀವನದಲ್ಲಿ ಕೃಷಿಪ್ರಧಾನ ಜೀವನದ ಒಂದು ಸಿರತೆ ಇಲ್ಲದಾಯಿತು. ಇದ್ದ ಭೂಮಿಯಲ್ಲಿಯೇ ದುಡಿದೋ ದುಡಿಯದೆಯೋ ಶಿಂದಿರುವದೇ ಉಪಜೀವಿ ಕೆಯ ನಿಶ್ಚಿತ ಸಾಧೆನೆವಾಗಿರುವಾಗ್ಯ ವಯಸ್ಸಿಗೆ ಬಂದ ಮಗನ ಮದುವೆ ಮಾಡಿ ಬಿಡುವದು ಸ್ವಾಭಾವಿಕವಾಗಿದ್ದಿತು. ಆದರೆ ಕಳೆದರ್ಧ ಶತಮಾನದಲ್ಲಿ ಉಂಟಾಗುತ್ತಿದ್ದ ಬದಲಾವಣೆಗಳು ನಮ್ಮಲ್ಲಿಯ ಮಧ್ಯಮವರ್ಗದವರ ಜೀವನದ ರೀತಿಯನ್ನಂತೂ ನಿಶ್ಚಯವಾಗಿ ಬದಲಿಸಿದವು. ಅದರಿಂದಾಗ ಉದ್ಭೂತವಾದ ಅನೇಕ ಪ್ರಶ್ನೆಗಳಲ್ಲಿ ಪ್ರೌಢಕುಮಾರಿಕೆಯ ಪ್ರಶ್ನೆಯೂ ಒಂದು ಮಹತ್ವದ ಅಂಶ. ಸ್ವತಂತ್ರವಾಗಿ ದುಡಿದು, ಗಳಿಸಿ, ಮನೆಹೂಡುವ ಗಂಡುಮಕ್ಕಳ ವಯಸ್ಸು ವರ್ಗದಲ್ಲಿ ಮುಂದೆ ಬಿದ್ದಂತೆಲ್ಲ ಕುಮಾರಿಕೆ ಯರು ಪ್ರೌಢರಾಗಿ ಮನೆಯಲ್ಲಿರಬೇಕಾಯಿತಷ್ಟೇ ಅಲ್ಲದೆ, ಶಿಕ್ಷಣ ಪಠೆದು, ಪುರುಷರಂತೆ ಅಲ್ಲಲ್ಲಿ ನವಕರಿ ದೊರಕಿಸಿ, ಬೆಳೆದು ನಿಂತ ತಮ್ಮ ತಂಜಿ ತಾಯಿಯರ ಸಂಸಾರಕ್ಕೆ ಆಧಾರ ಕೊಡುವ ಪ್ರಸಂಗವೂ ಅನೇಕ ಕುಮಾರಿಕೆಯರಿಗೆ ಉಂಟಾದ್ದರಿಂದ ಅಸರಿಹಾರ್ಯವಾಗಿ ಮದುವೆ ಮುಂಜಿ ಬಿದ್ದಿತು. ಹೀಗೆ ಸ್ವಾಭಾನಿಕನಾದ ಪುರುಷನ ಸಹವಾಸದ ಸುಖ ಯೌವನ

ದಲ್ಲಿ ದೊರೆಯದೆ ಹೋದ, ಅನೇಕ ಕೋಪ ತಾಸಗಳಿಂದ ಬೆಂದ ಅನೇಕ ಸಲ ನಿಷ್ಕಾರಣವಾದ ಅವಹೇಲನೆಗೂ ತುತ್ತಾದ ಕುಮಾರಿಕೆಯರು ಬಿಸು ಸುಯ್ವ ನಿಟ್ಟಿಸಿರುಗಳ ಚಿತ್ರಣವೇ ಅವರ " ಮೊಗ್ಗೆಗಳ ನಿಟ್ಟುಸಿರು” ಎಂಬ ಪುಸ್ತಕದ ವಸ್ತುವಾಗಿದೆ. ತಾವು ಸ್ವಂತ ಕಂಡರಿತ, ಇಂತಹ ಅನೇಕ ತಪ್ತ ಅಲರುಗಳ ಮೂಕ ವೇದನೆಗಳ ಹೃದಯ ಕೊರೆವ ಚಿತ್ರಗಳನ್ನು ಹೃದಯ ಕರಗುವಂತೆ ನಿಭಾವರೀಬಾಯಿಯವರು ಚಿತ್ರಿಸಿದ್ದಾರೆ,

ಮನುಷ್ಯ ಜೀವನದಲ್ಲಿ ಕಾಮದ ಸ್ಥಾನವೇನು ಎಂಬ ಸಮಸ್ಯೆ ಇಂದು ನಿನ್ನೆಯದಲ್ಲ ; ಅದರ ವಾಜ್ಮಯಿಸಾನ ಚಿತ್ರಣವೂ ಅಷ್ಟೇ ಪುರಾತನವಾದು ದಾಗಿದೆ... ಆದರೆ ಅದರಿಂದ ಉದ್ಭೂತವಾಗುವ ಸಮಸ್ಯೆಗಳನ್ನು ಜನೆ ಸಾಮಾನ್ಯರ ದೃಷ್ಟಿ ಯಿಂದ, ಎಲ್ಲ ಪೂರ್ವಗ್ರಹ, ಎರವಲು ನೀತಿಯ ಕಲ್ಪನೆ ಗಳನ್ನು ಬದಿಗಿಟ್ಟು ಶಾಸ್ತ್ರೀಯವಾಗಿ, ಲೈಂಗಿಕ ಪ್ರವೃತ್ತಿಯ ಎಲ್ಲ ತರದ ಅಭಿವ್ಯಕ್ತಿಯ ತರಹೆಗಳನ್ನು, ಅದರೆಲ್ಲ ರೊಪು-ರೆಂಗುಗಳನ್ನು, ಪ್ರಕೃತಿ- ವಿಕೃತಿಗಳನ್ನು ಕೂಲಂಕಷವಾಗಿ ಚರ್ಚಿಸಲು ಮೊದಲಾದುದು ಕಳೆದ ಒಂದು ಶತಮಾನದಲ್ಲಿಯೇ, ಮಾನಸಶಾಸ್ತ್ರದ ಅಭ್ಯಾಸದಲ್ಲಿ ವಿಶೇಷವಾಗಿ ಸುಪ್ತ ಮನದ ನಮ್ಮ ಜ್ಞಾನದಲ್ಲಿ ಮಹಾಕ್ರಾಂತಿಯನ್ನುಂಟುಮಾಡಿದ ಜರ್ಮನ್‌ ಮಾನಸಶಾಸ್ತ್ರ ಜ್ಞನಾದ ಸಿಂಗ್ಮನ್‌ ಫ್ರಾಯಿಡ್‌ (Syngman ¥Freud)ನ ಹೆಸರು ಕೇಳದವರಿಲ್ಲ. ಅವನೆ Psycho-analysis— ಮನೋ ವಿಶ್ಲೇಷಣ ?ದ ತತ್ವ ಮನುಷ್ಯನ ಮೂಲಭೂತವಾದ ಕಾಮಭಾವನೆಗೆ ಅತ್ಯಂತಿಕ ಮಹತ್ವವನ್ನು ತಂದೊದಗಿಸಿತು. ಮೂಲಭೂತ ಕಾಮ ಪ್ರವೃತ್ತಿಯೇ ಜೀವನದ ಚೈತನ್ಯದ ಮೂಲಸ್ವರೂಪನೆಂದೂ ಅದೇ ಮಾನವನ ಎಲ್ಲ ಅವಸ್ಥೆ ಗಳಲ್ಲಿ ಅವನೆಲ್ಲ ಕೃತಿಗಳಲ್ಲಿ ಮಾರ್ಪಟ್ಟು ರೂಪ ವಡೆಯುತ್ತದೆಯೆಂಬುದೇ ಅವನ ಮಹತ್ವದ ಸಿದ್ಧಾಂತ. ಅವನ ಎಲ್ಲ ಸಿದ್ಧಾಂತಗಳ ಸರಿಯಾದ ಅರ್ಥವೇನು ಎಂಬ ಬಗ್ಗೆ ಮತಭೇದವಿದ್ದಂತೆಯೇ ಅವನ ತಾತ್ವಿಕಭೂಮಿಕೆಯ ಸತ್ಯತೆಯ ವಿಷಯವಾಗಿಯೂ ಮತಭೇದವಿಲ್ಲ. ಅದೇನೇ ಇದ್ದರೂ ಅವನ ಸಿದ್ಧಾಂತಗಳು ಉಳಿದೆಲ್ಲ ಸಾಮಾಜಿಕ ಪ್ರಶ್ನೆಗಳ ಅಭ್ಯಾಸದ ಮೇಲೂ ಅಲ್ಲದೆ ಆಧುನಿಕ ವಾಜ್ಮಯದ ಮೇಲೂ ಬಹಳ ಗಾಢವಾದ ಪರಿಣಾಮವನ್ನುಂಟುಮಾಡಿವೆ,

8

ಫ್ರಾಯ್ಡನ ಮನಃಶಾಸ್ತ್ರವೇ ಆಗಲಿ, ಡಾರ್ನಿನ್ನನ ಪ್ರಾಣಿಶಾಸ್ತ್ರವೇ ಆಗಲಿ ಮನುಷ್ಯನ ಜೀವನದ ವಿಷಯಕವಾದ ಶತ್ವಲೋಕಕ್ಕೆ ಒಂದು ಮಹತ್ವದ ಪ್ರಮೇಯನನ್ನೊದಗಿಸಿಕೊಟ್ಟಿವು : ನಮ್ಮ ಬುವಿಯ ಬಾಳಿನ ಒಳಿತು-ಕೆಡಕುಗಳು, ನಮ್ಮ ಬಾಳಿನ ಏರಿಳಿತಗಳು ಇಲ್ಲಿಯದೇ ಒಂದು ನಿಯಮಕ್ಕೆ ಒಳಪಟ್ಟವೆಯೆೇ ಹೊರತು, ನಮ್ಮೆಲ್ಲ ಆಗು-ಹೋಗುಗಳನ್ನು ಹೊರಗಿನಿಂದ ಗೊಂಬೆಯಾಟಿವಾಡಿಸುವ ಶಕ್ತಿಯೊಂದು ಬೇರೆಯಾಗಿಯೇ ಇಲ್ಲ. ಅಂದಿಗೆ ಧರ್ಮ, ಅರ್ಥ, ಕಾಮ, ಮೋಕ್ಷಗಳ ಕಲ್ಪನೆಗಳೂ ಬೇರೆ ಯಾದವು. ಮುಖ್ಯವಾಗಿ ಮೋಕ್ಷದ ಕಲ್ಪನೆ ಬದಲಿಸಿತು. ಒಂದು ಅವ್ಯಕ್ತವಾದ ಹರಮ ಆತ್ಮನಲ್ಲಿ ನಮ್ಮೆಲ್ಲರ ಸಹಸ್ರಾರು ಆತ್ಮಗಳು ವಿಲಿನ ಗೊಳ್ಳುವ ಸಾಯುಜ್ಯದ ಬದಲು, ಇಲ್ಲಿಯ ನಮ್ಮ ಬಾಳನ್ನೇ ಇನ್ನಿಷ್ಟು ಆರ್ತತೆಯಿಂದ ನಂಬಿರುವ, ಸಕಲ ಮಾನನ ಜಾತಿಯ ಸಹಕಾರ,ಪ್ರೇಮಗಳ ಅಸ್ತಿವಾರದ ಮೇಲೆ ಕಟ್ಟಲ್ಪಟ್ಟ ನಿರಿ:ಶ್ವರ ಸಂಸ್ಕೃತಿಯ, ನನಮಾನವೀಯ ತೆಯ ಆದರ್ಶವೊಂದು ನಮ್ಮ ಜೀವನದ ಧೈನವೆಂಬ ತಿಳುವಳಿಕೆ ಬೆಳೆದು ಬಂದಿತು. ತತ್ವ ಪ್ರಣಾಲಿಗೆ ಅನುಕೂಲವಾದ ಅಂಶಗಳು ಎಲ್ಲ ಕಾಲದ ವಿಚಾರವಂತರಲ್ಲಿ ಕಂಡುಬಂದರೂ ಯೂರೋಪಿನಲ್ಲಿ ಹೊಸ-ಕಿಳಿವಿನ ಬೆಳಕು (Renaissance) ಮೂಡಿದ ಕಾಲದಿಂದ ಅದಕ್ಕೊಂದು ಕಳೆಕಟ್ಟಿ ಒಂದು ನಿರ್ದಿಷ್ಟವಾದ ಸ್ವರೂಪ ಬರತೊಡಗಿತು. ಐಹಿಕ ಸ.ಸಂಸ್ಕೃತತೆ (Materialist Culturism) ಎಂದು ನಿರ್ದೇಶಿಸಬಹುದಾದ ವಿಚಾರ ಸರಣಿಯು ಧಾನಿ೯ಕ ಅಂಧೆಶ್ರದ್ಧಾನಾದನನ್ನು (Religious Obscur- antism) ಸಂಪೂರ್ಣವಾಗಿ ಓರಾಕರಿಸ್ಕಿ ಕೇವಲ ಮಾನವೀಯವಾದ ಆದರ್ಶವೊಂದನ್ನು ಗುರಿಯಾಗಿಟ್ಟುಕೊಂಡು ಆದರ್ಶವನ್ನು ಕ್ರಮೇಣ ಹೆಚ್ಚುಹೆಚ್ಚಾಗಿ ಆವಿಷ್ಯರಿಸಲು ನಡೆಸಿದ ಪ್ರಯತ್ನಗಳ ಫಲವಾಗಿಯೇ ಆಧುನಿಕ ವಿಜ್ಞಾನವೂ ಮತ್ತು ಅದರ ನಿಜವಾದ ಕಿರುಳನ್ನೇ ಪ್ರತಿಫಲಿಸುವ ಸಮಾಜಶಾಸ್ತ್ರಗಳೂ ನಿರ್ಮಿತವಾದವು. ಕಳೆನೆರಡು ಶತಮಾನಗಳಲ್ಲಿ ನಡೆಸಿದ ಸಾಮಾಜಿಕ ಆರ್ಥಿಕ, ರಾಜಕೀಯ ಪ್ರಯೋಗಗಳು ನವೀನ ದರ್ಶನವನ್ನು ಸತ್ಯಸೃಷ್ಟಿಗಿಳಿಸಲು ಹೆಣಗಿದವು. ಅವೃತಮಂಥನದ ಮಹಾ ಕೋಲಾಹಲದಲ್ಲಿ ಹಲಾಹಲವೂ ಎದ್ದಿದೆ, ಒಂದು ಅಮೂರ್ತವಾದ,

ಕಲ್ಪನಾಮಯವಾದ ಮಾನವನ ವಿಳಿಗೆಗೆಂಜೇ ಮಾನವನೆ ಮೂಲಭೂತ ಸ್ವಾತಂತ್ರ್ಯವನ್ನೇ ಹೆರಣಗೊಳಿಸಿ, ಅವನ ವ್ಯಕ್ತಿತ್ವವನ್ನು ಕಃಸದಾರ್ಥ ವನ್ನಾಗಿಸಿ, ಕೇನಲ ಯಾಂತ್ರಿಕ ಪ್ರಗತಿಯ ಗುಡಿ ಕಟ್ಟಿಲೆಳಸುವ ಪ್ರಯತ್ನ ಗಳು ಬಹಳ ದೊಡ್ಡ ಪ್ರಮಾಣದಿಂದ ನಡೆದಿದ್ದು, ಮತ್ತೊಂದು ತರದ ಐಹಿಕ ಅಂಧಶ್ರದ್ಧಾ ವಾದವೊಂದು ತಲೆಯೆತ್ತಿದೆ. ಅಲ್ಲದೆ ಸದಾರ್ಥವಿಜ್ಞಾನ, ಪ್ರಾಣಿ ಶಾಸ್ತ, ಮನಃಶಾಸ್ತ್ರದ ಇತ್ತೀಚಿನ ಕೆಲವು ಬಿಡಿಸಲಾರದ ಸಮಸ್ಯೆಗಳು ಕಳೆದ ಮೂರು-ನಾಲ್ಕುನೂರು ವರ್ಷಗಳ ಹೊಸ ತಿಳುವಳಿಕೆಯ ತಳಪಾಯ ಭದ್ರವಾಗಿಲ್ಲವೆಂಬ ಕೇವಲ ಭೌತಿಕವಾದ ತತ್ವಜ್ಞಾನದ ಅಪೂರ್ಣತೆಯೇ ಅದರ ಕಾರಣವೆಂಬ ಮಾತನ್ನು ಸಿದ್ದ ಗೊಳಿಸುತ್ತಿದೆಯೆಂದು ಸಾರುವವರೂ ಇದ್ದಾರೆ. ಹೀಗೆ ಮೂಲ ಅಜ್ಞಾನದಿಂದ ಮಾನವನ ಬಿಡುಗಡೆಗೆಂದು ನಡೆದ ಅವ್ಯಾಹತ ಸಾಹಸ ಪ್ರಯತ್ನಗಳು ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ. ಆದರೆ ಯಾವದೇ ತರದ ಧಾರ್ಮಿಕ ಕಲ್ಪನೆಯ, ಮೂಲ ಸಂಕಲ್ಪವಾದದ (Teleology) ಪುನರಾವೃತ್ತಿಯು ನಮ್ಮ ಸಮಸ್ಯೆಗಳನ್ನು ಬಿಡಿಸಲಾರದೆಂದೂ, ವಿಜ್ಞಾನದ ದಾರಿಯೇ ಸತ್ಯದರ್ಶಿಯೆಂಂದ್ಕೂ ಅದೇ ನಮ್ಮ ಸಮಸ್ಯೆಗಳಿಗೆ ಸಮಾಧಾನಕರವಾದ ಉತ್ತರ ಕೊಡಬಲ್ಲದೆಂದೂ ಮತ್ತು ಮನುಷ್ಯನೇ ಇಂದಿನವರೆಗಿನ ಎಲ್ಲ ತತ್ವಜ್ಞಾನಗಳನ್ನು, ನಮ್ಮ ಬಾಳುವೆಯ ಆಗುಹೋಗುಗಳನ್ನು ರೂಪಿಸಿದವನಾದುದರಿಂದ ಅವನು ತನ್ನ ಕ್ರಿಯಾತ್ಮಕ ಶಕ್ತಿಯಲ್ಲಿ ಅನುಭವದ ಪಾಠಗಳನ್ನು ಕಲಿತು ತಪ್ಪು ಗಳನ್ನು ತಿದ್ದಿಕೊಂಡು ತಿಳಿದು ನಡೆಯಬಲ್ಲ ತನ್ಹ ಸಂಸ್ಕಾರಕ್ಷಮ ಸಮಂಜತೆ ಯಲ್ಲಿ ವಿಶ್ವಾಸವಿಟ್ಟು, ಹೊಸ ಜಗವನ್ನು ನಿರ್ಮಿಸಲು ಹೆಣಗುವದರಲ್ಲಿಯೇ ಸಕಲ ಪುರುಷಾರ್ಥಗಳೂ ಅಡಗಿವೆಯೆಂದು ಅನೇಕ ವಿಚಾರವಂತರು ಪ್ರತಿಪಾದಿಸಹತ್ತಿದ್ದಾರೆ. ಮೂಲಗಾಮಿಯಾದ ವಿಚಾರಗಳು ಈಗಾಗಲೇ ಹೊಸ ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಹೊಸ ಸಮಾಜ ಸಂಘಟನಾ ಶಾಸ್ತ್ರಗಳಿಗೆ ರೂಪು ಕೊಡಹತ್ತಿವೆಯಲ್ಲದೆ, ಅಲ್ಲಲ್ಲಿ ತರದ ನವಜೀವನ ಕಟ್ಟುವ ಪ್ರಯತ್ನಕ್ಕೂ ಆರಂಭವಾಗಿದೆ. ಆದರೆ ರೀತಿ ಕೆಲವು ಗುರುತು ಹಾಕಿಕೊಂಡು ಮುನ್ನಡೆದಿರುವ ನವೀನ ಮಾನವತೆಯು, ಮಾನವನ ವ್ಯಕ್ತಿತ್ವದ ಅನನ್ಯತೆಯನ್ನೂ ಅನನ ಮನದ ಅಂತಃಸತ್ವದ ಬೆಳನಣಿಗೆಯ

10

ಅಮರ್ಯಾದಿತ್ರವನ್ನೂ ಅಲ್ಲಗಳೆಯುವದಿಲ್ಲ. ವಿಚಾರಸ್ವಾತಂತ್ರ್ಯ, ಸಕಲರ ಸಾಮೂಹಿಕ ಹಿತಕ್ಕೆ ಕಣ್ಣೆ ದುರಿನಲ್ಲಿಯೇ ಭಂಗತಾರದ ವೈಯಕ್ತಿಕ ಅಥವಾ ಸಾಂಘಿಕ ಆಚಾರ ಸ್ವಾತಂತ್ರ್ಯ ಇವುಗಳನ್ನು ಅದು ವ;ನ್ಲಿಸುತ್ತಡೆ. ಮಾನವನ ಮನದ ಅಪರಿಮಿತ ಆಳವನ್ನೂ ಅವನ ಸಾತ್ವಿಕ ಸತ್ವ ಕುದುರಿ ಅನಂಶ ವಾಗಿ ವಿರಸಿಸಬಲ್ಲದೆಂಬ ಮಾತನ್ನೂ ಒಪ್ಪಿರುವಾಗಲೇ ನಮಗೆ ಕೆಲವೊಂದು ಪ್ರಮೇಯಗಳು ಇಂದು ಬಗೆಹೆರಿಯದಿದ್ದಾಗ್ಯೂ, ಯಾವುದೊಂದು ಅಂಧೆ ಶ್ರದ್ಧೆ ಯಾಗಲಿ, ಗೂಡವಾದವಾಗಲಿ, ಜ್ಞಾನದ ತಿಳಿಬೆಳಕನ್ನು ಕೊಡಲಾರೆ ದೆಂಬ ಮನೋವೃತ್ತಿ ಹೊಸತನದ ಒಂದು ಅತ್ಯಂತ ಮಹತ್ವದ ಅಂಗ ವಾಗಿ ಬಂದಿದೆ. ಮಾನವನ ವರೆಗಿನ ಐತಿಹಾಸಿಕ ಬೆಳವಣಿಗೆ ಒಂದು ಮಾತನ್ನೂ ಖಚಿತವಾಗಿ ಸಾರುತ್ತದೆಂದು ಅದು ನಂಬಿರುತ್ತದೆ. ಮಾನವ ಜೀವಿತದ ಸಾರ್ಥಕತೆಯ, ಇತಿಕರ್ತವ್ಯತೆಯ, ಸಕಲ ಪುರುಷಾರ್ಥಗಳ ಸಾರವನ್ನು ಅದು ಹೆಚ್ಚುಕಡಿಮೆ ಬುದ್ಧಿಗೆ ವೇದ್ಯವಾಗಬಹುದಾದ ರೀತಿಯಲ್ಲಿ ಕಾಣಲೆಳಸುತ್ತಡೆ. ತಿಳಿವಿನ ತತ್ವಪ್ರಸಂಚಕ್ಕೆ ಇಸಿ ಧ್ಯುವ. ಆದರೆ ಧ್ಯುವ ಒಂದು ವಿಚಾರಸರಣಿಯ ದಾರಿಗೆ ಬೊಟ್ಟು ಮಾಜ ತೋರಿಸುತ್ತ ಜಿಯೇ ಹೊರತು, ಅದೊಂದು ಅವಿಚಲವೂ ಅನಾದಿಯೂ, ಪರಾಶ್ಚರವೂ ಆದ ಧ್ಯೇಯ ಬಿಂದುವಾಗಿಲ್ಲ. ಅದೊಂದು ಗತಿಮಾನ ಧ್ಯುವವಾಗಿಜೆ. ಅತಿ ರೇಕದ ಯಾಂತ್ರಿಕ ಜಡವಾದದಂತೆ ಅದು ಏಕಮುಖವಾದ ಹಟವಾದಕೆ ಆಸ್ಪದ ಕೊಡುವದಿಲ್ಲ. ಸೃಷ್ಟಿಯ ವೈಶಾಲ್ಯ, ಸಮಗ್ರತೆ ಮತ್ತು ಸಮ್ಯಕ್ಷ್ಯ ವನ್ನೇ ಆದು ತನ್ನ ಧೇಯವಾಗಿಟ್ಟುಕೊಂಡಿದೆಯಾದರೂ ನಮ್ಮ ಜೀವನವು ಅಪೌರುಸಷೇಯವೂ, ಅಧಿದೈವಿಕವೂ, ಆದ ಮೂಲ ಸಂಕಲ್ಪವೊಂದರ ಪೂರ್ವನಿರ್ಮಿಶ (pre-detormined) ವಿಕಾಸವೆಂಬ ಅಥವಾ ಅದರ ಇಚ್ಛಾ ಮಾತ್ರವಾದ ಗೊಂಬೆಯಾಟದ ಕೇವಲ ಪಡಿನೆಳಲು ಮಾತ್ರ ಅದು ಆಗಿದೆಯೆಂಬ ಮಾತನ್ನು ಅದು ಒಪ್ಪುವದಿಲ್ಲ.

ರೀತಿ ಮುಪ್ಪುರಿಗೊಂಡು ಮುನ್ನ ಡೆದಿರುವ ವಿಚಾರ ಪ್ರವಾಹಗಳು ಎಲ್ಲ ವಿಚಾರವಂತರ ಸೊತ್ತಾಗುತ್ತ ನಡೆದಿನೆ. ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರಗಳಿಗೆ ಅವು ಹೊಸರೂಪಕೊಟ್ಟಿಂತೆಲ್ಲ, ಕಲ್ಪನೆಗಳು ಸಮಾಜಜೀವನದಲ್ಲಿ ನೆಲೆಗೊಳುವಂತೆ ಸಾಮಾಜಕ ಸಂಸ್ಥೆಗಳಿಗೆ ರೂಪ ಕೊಡುವ ಕೆಲಸವಾಗಿದೆ. ಇದೆಲ್ಲದರ ಸಡಿನೆಳಲು ಸಾಹಿತ್ಯದಲ್ಲಿ ಮೂಡಲಿಲ್ಲ.

71

ಭೂತಾಟಕೆ, ಕಣ್ಣು ಕಟ್ಟು, ದೈವವಾದ ಮತ್ತೆ ಇನ್ನಿತರ ಪ್ರಾಚೀನ

ಸಮಾಜಗಳ ಬಣ್ಣ ಬಣ್ಣದ ಅದ್ಭುತ ನಂಬಿಕೆಗಳನ್ನುಳಿದು. ಹೊಸ ತಿಳಿವಿನ ಬೆಳಕಿನಿಂದ ಪ್ರೇರಣೆ ಪಡೆದು ಮನುಷ್ಯ ತನ್ನವೇ ಬುದ್ಧಿ ಸತ್ವಗಳನ್ನು ಪಟ್ಟಗಟ್ಟ ಮಾನನಿ:ಸಹಕಾರ ಸಮಂಜಸತೆಗಳನ್ನು ನೆಂಬಿದಂತೆಲ್ಲ, ಸಾಹಿತ್ಯ ದಲ್ಲಿಯೂ ಮನೊ ವ್ಯಾಪಾರಗಳ ಚಿತ್ರಣವೇ ಪ್ರಾಧಾನ್ಯ ಸಡೆದಿದೆಯಲ್ಲದೆ, ಅದಕ್ಕನುರೂಸವಾದ ಕಾದಂಬರಿ, ಸಣ್ಣಕತೆಗಳೇ ಮೊದಲಾದ ವಾಜ್ಮಯ ಪ್ರಕಾರಗಳು ಬೆಳೆದು ಬಂದಿರುವದು ಕಂಡು ಬರುತ್ತದೆ. ಮೇಲೊಮ್ಮೆ ಹೇಳಿದಂತೆ ಮಾನವ ಜೀವನದ ಚಿತ್ರಣವೇ ಎಲ್ಲ ಕಾಲಗಳ ವಾಜ್ಮಯದ ಕಾರ್ಯವಾಗಿದ್ದರೂ, ಹೊಸ ಜಗದ ಹೊಸ ಆರ್ಥೊತ್ಪಾದನೆಯ ಪದ್ಧತಿ ಯಿಂದಾಗಿ ಬಳಕೆಯಲ್ಲಿ ಬಂದ ಅವಾಢವ್ಯವಾದ್ಕ ತೊಡಕು ತೊಡಕಾದ ಸಮಾಜರಚನೆ ಮತ್ತು ಅದರಿಂದುದ್ಭೂ ತವಾದ ನಾನಾಪ್ರಕಾರದ ಮನುಷ್ಯ ಮನುಷ್ಯರ ನಡುವೆ ಬೆಳೆದು ಬಂದಿರುವ ಸಂಬಂಧೆದ ಪರಿಗಳು, ಹೊಸ ಹೊಸ ಸಮಸ್ಯೆಗಳನ್ನು ನಿರ್ಮಿಸಿ ನವ ಮಾನವನಿಗೆ ಯಕ್ಷಪ್ರಶ್ನೆಗಳನ್ನೊಡ್ಡಿದವು. ಪ್ರಶ್ನೆಗಳಿಗೆ ಉತ್ತರಕೊಡಲು ನವಮಾನವನು ಮಾಡಿದ ಪ್ರಾಮಾಣಿಕ ನವಮಾನವನ ಅಂತಸ್ಥ ಪ್ರತಿಭೆಗೆ, ಅವನು ಇಲ್ಲಿಯ ವರೆಗೆ ಸಾಹಸಕ್ಕೆ ಸಾಕ್ಷಿಯಾಗಿವೆ. ಎಲ್ಲ ಸಮಸ್ಯೆಗಳೂ ಬಿಡದಿದ್ದರಿಲ್ಲ. ಅವನು ಇಲ್ಲಿಯವರೆಗೆ ಸಾಧಿಸಿರುವ ಕಾರ್ಯಭಾಗನೇ ಸ್ತುತ್ಯುವೂ, ಅವನ ಶಕ್ತಿಸಾಹಸಗಳಿಗೆ ಒಪ್ಪು ವಂತಹದೂ ಆಗಿದೆ. ಇದನ್ನು ಒರೆಯುತ್ತಿದ್ದಂತೆಯೇ ಇಂದಿನ" ಟಾಯಿಮ್ಸ' ಪತ್ರದಲ್ಲಿ ಇಂದಿನ ಯುಗದ ಹಿರಿತತ್ವಜ್ಞಾನಿಗಳಲ್ಲೊಬ್ಬರೆಂದು ಗಣಿಸಲ್ಪಡುವ ಬರ್ಟ್ರೃಂಡ ರಸೆಲ್ಲರ, ನಮ್ಮ ಇಂದಿನ ಭೂಮಿಕೆ (Philosophy of the times—a Personal 01666) ಎಂಬ ಸ್ಫುಟ ಲೇಖವೊಂದು ಪ್ರಕಟಿ ವಾಗಿದ್ದು, ಅವರು ಇದೇ ಮಾತನ್ನು ರೀತಿ ಸುಂದರವಾಗಿ ಸಿರೂಪಿಸಿ ದ್ಹುಕೆ-..

The western nations have discovered a way of life exempt from certain evils that have beset man- kind ever since human beings existed ...They have found out how to combine order with a very high

12

degree of liberty and with a progressive culture, which 18 one of the glories of our age.

ಹೆಚ್ಚು ಕಡಿಮೆ ಇಡೇ ನಿಚಾರರಸಜ್ಞರೆಲ್ಲರು ಹೇಳಿದ ಒಂದು Progressive culture—uoದು ಸಾಂಸ್ಕೃತಿಕ ಮುನ್ನಡೆ-ನನೀನ ವಾಜ್ಮಯವನ್ನು ಪ್ರವೇಶಿಸಿದೆ, ಅಧಿದೈವಿಕವಿಲ್ಲದ ನೀತಿ ಮತ್ತೆಯೊಂದು (Secular Ethics) ಅದರ ಚುಕ್ಕಾಣಿಯಾಗಿದೆ.

ಎಲ್ಲ ನಿಚಾರಗಳು ಇಷ್ಟು ಸ್ಪಷ್ಟವಾದ ರೀತಿಯಲ್ಲಿ ಎಲ್ಲ ನವ ಸಾಹಿತ್ಯ ಕೃತಿಗಳನ್ನು ಪ್ರೇರಿಸಿನೆಯೆಂದಾಗಲೀ ಅಥವಾ ಎಲ್ಲ ಸಾಹಿತ್ಯ ಕೃತಿ ಗಳೂ ಹೊಸದಾದ ಸರ್ವಾಂಶಗಳನ್ನು ಸ್ಪೀಕರಿಸಿನೆಯೆಂದಾಗಲೀ ನಮ ಅಭಿಪ್ರಾಯವಲ್ಲ. ಅನೇಕರು ಹೊಸ ಶ್ರದ್ಧೆಯನ್ನು ಾಣದೆ ಹೋಗಿದ್ದಾರೆ. ಅಷ್ಟೇಕೆ ವಾಜ್ಮಯದಲ್ಲಿ ಸರಿಯಾದ ಚಿತ್ರಣವು ವಿರಳವೆಂದೇ ಹೇಳಬೇಕು. ಆದರೆ ನಮ್ಮ ಸಮಸ್ಯೆಗಳನ್ನು ಚಿತ್ರಿಸುವ. ಹಳೆಯ ಶ್ರದ್ಧೆಯನ್ನು ತಿಳಿದೋ ತಿಳಿಯಬೆಯೋ ಬಿಟ್ಟು ಕೊಟ್ಟವರೆಷ್ಟೋ ಜನ. ಅದರಿಂದ ಪರಂ ಸರಾನುಗತಿಕ ಶ್ರದ್ಧೆಯಿಂದ ವ್ಯಕ್ತಿತ್ವಕ್ಕೂ, ವಿಚಾರಗಳಿಗೂ ಒದಗುತ್ತಿದ್ದ ಸ್ಥೈರ್ಯ, ಸುಸಂಗತಿಗಳು ಮಾತ್ರ ಇಲ್ಲವಾಗಿ, ಅಸರಿಮಿತವಾಗಿ ತನ್ನೊಡನೆ ಶಾನು ಕಾದುವ ನೆಲೆಗಾಣದವರ ಬುದ್ಧಿ ಮನಸ್ಸುಗಳ ಬನ್ನಬಡಿಸುವ ಅಂಡಲಿನಿ ಕೆಯ ಚಿತ್ರಣಕ್ಕೆ ಮೊದಲಾಯಿತು. ವಿಭಾವರೀ ಶಿರೂರಕರ ಅನರ ಮೊದಲ ಮೂರು ಪುಸ್ತಕಗಳು ಜಾತಿಗೆ ಸೇರಿದುವೆಂದು ಹೇಳಬಹುದು, ಅಲ್ಲಲ್ಲಿ ಹೊಸಶ್ರದ್ಧೆಯ ಉರುಗೋಲು ದೊರೆಶಂತೆನಿಸಿದರೂ, ದಿಕ್ಕುಗಾಣದಂಶಾದ ಜೋಣಿಯ-- ಪೂರ್ವ ಸಂಸ್ಕಾರೆ ಮತ್ತು ಅದನ್ನು ಅಲ್ಲಗಳಿದು ಒಳಗಿನಿಂದ ಬರುವ ಬಲವತ್ತರವಾದ ಎಳೆಶದ ಪರಸ್ಪರ ವಿರುದ್ಧವಾದ ಪ್ರವಾಹಗಳ ಮೇಲಿನ ಹೊಯ್ದಾಟದ ಚಿತ್ರವೇ, ವಿಶೇಷವಾಗಿ ಪುಸ್ತಕಗಳಲ್ಲಿ ಕಂಡು ಬರುತ್ತದೆ. "ಕಳ್ಳಾಂಜೆ ನಿಶ್ಚಾಸ'ದ ಕೊರಗುವ ಆದರೆ ಬಾಳಬೇಕೆಂಬ ಮಹಾ ದಾಶೆಯಿಂದ, ಮಹಾ ಸಮಾಜದ ವಿರೋಧವನ್ನೆಳಸುವ, ಬಂಧನ ಬಿಡಿಸಲಾ ಗದ ಕುಮಾರಿಕೆಯರ, ಹಿಂಗೋಳ್ಯಾವರ? ನಾಚಿಕೆ“ ಇಲ್ಲ, ಇಲ್ಲ, ವಿರಾಗ, ನಿನ್ನದೇನೂ ತಪ್ಪಿಲ್ಲ, ನನ್ನದೂ ಇಲ್ಲ ಯಾರ ತಪ್ಪೂ ಇಲ್ಲ; ಆದರೂ ಆದರೂ ಎಂದು " ಆದರೂ? ಒಗಟಿನನ್ನು ಒಡೆಯಲಾರದೆ ಗಾಸಿ

13

ಗೊಂಡ_-ಆಚಲೆ, ವೈಶಾಖನ ರಾಜಕೀಯ ಆದರ್ಶವಾದಕ್ಕೆ, ಅನನ ಸಾಹೆಸ ಪೂರ್ಣವಾದ ವ್ಯಕ್ತಿತ್ವಕ್ಕೆ ಮನಸೋತು, ಆದರೂ ಅವನ ಪ್ರಖರ ವಾದ ಹೊಡೆದಾಟದ ಜೀವನದಲ್ಲಿ ಸಹಭಾಗಿಯಾಗಬಲ್ಲನೇ ನಾನು ಎಂದು ಒಂದೇಟು ಹೊಡೆಯುವ, ದೂರದಿಂದ ತಿರುತಿರುಗಿ ಪ್ರೀತಿಆದರೆ ತುಂಬಿದ ಕಣ್ಣುಗಳಿಂದ ಅವನನ್ನೇ ನೋಡುತ್ತ, ತಾನು ಬೇಡಿಬಯಸಿದ ಜೀವನದ ಸಂಗಾತಿಯನ್ನು ತಾನೇ ಬಿಟ್ಟುಗೊಟ್ಟ ಹಿಂದಕ್ಕೆ ನಡೆದ ಮಕ್ಕ ಳಾದ ಅನುರಾಧೆ (* ನಿರಲೇಲೆ ಸ್ವಪ್ನದ ನಾಯಿಕೆ) ಎಲ್ಲರಲ್ಲಿ ಒಂದು ಸಾಧರ್ಮ್ಯವನ್ನು ಕಲ್ಪಿಸಬಹುದು. ಅಥವಾ ಇಂತಹೆ ಚಿತ್ರಣಕ್ಕೆ ಸ್ಫೂರ್ತಿ ಕೊಡುವ ಮನೋಭೂಮಿಕೆಯಾದರೂ ಒಂದೇ ತೆರೆನಾದುದೆಂದು ಹೇಳ ಬಹುದು. ಪ್ರತಿಭಾಶಾಲಿಯಾದ ಮಹಾರಾಸ್ಟ್ರೀಯ ಪ್ರೀಯೊಬ್ಬಳ ಮನದ ಬೆಳವಣಿಗೆಯನ್ನು ಮೂರು ಪುಸ್ತಕಗಳಲ್ಲಿ ಕಾಣಬಹ:ದು. ಕಳ್ಯಾಂಜೆ ನಿಶ್ರಾಸ”ದ ಪ್ರೌಢ ಕುಮಾರಿಕೆಯೆೇ ಮುಂದೆ ಬೆಳೆದು ಸ್ತ್ರೀಯಾಗಿ ಹೊಸ ಹೊಸ ಸಮಸ್ಯೆಗಳನ್ನೆದುರಿಸಿದಾಗ ಅವುಗಳ ವಿಷಯದ ಅವಳ ಪ್ರತಿ ಕ್ರಿಯೆಯ ಒಂದು ವಿಶಿಷ್ಟ ಪ್ರಕಾರವನ್ನು ಇಲ್ಲಿ ಕಾಣಬಹುದು. ಸ್ರೀ ಯಂತೆ ವಿಚಾರ ಮಾಡುವ ಇತರೆ ನೂರಾರು ಸಾವಿರಾರು ಸ್ತ್ರೀ-ಪುರುಷರು ಮಹಾರಾಷ್ಟ್ರದ ಸುತಿಕ್ಷಿತರಲ್ಲಿದ್ದಾರೆ, ೧೫-೧೬ ವರ್ಷಗಳ ಹಿಂದೆ ಮೊದಲಿಗೆ ಪುಸ್ತಕ ಪ್ರಕಟಿವಾದಾಗಲಂತೂ ಒಂದು ಕೋಲಾಹಲವೇ ಎದ್ದು ಹೋಯಿತು. ಅವರ ಗುಪ್ತನಾಮದ ಕತೆಯೂ ಅದಕ್ಕೊಂದು ವಿಶೇಷ ಕಾರಣವಾಯಿತು. ಯಾಕಂದರೆ, ಇಷ್ಟು ಸ್ಪಷ್ಟವಾದ ಶಬ್ದಗಳಲ್ಲಿ ಸ್ತ್ರೀಯೊ ಬ್ಬಳು ಮನಬಿಚ್ಚಿ ತನ್ನ ರೈಂಗಿಕ ಜೀವನದ ಸಮಸ್ಯೆಗಳನ್ನು ಚರ್ಚಿಸತೊಡ ಗಿದೊಡನೆ, ಸುಧಾರಕರು, ಹೊಸ ವಿಚಾರಗಳನ್ನೊ ಫುವವರು, ವಿಶೇಷವಾದ ಮಹಾರಾಷ್ಟ್ರದ ಸುಶಿಕ್ಷಿತ ಸ್ತ್ರೀಸಮಾಜವು ಅವಳನ್ನು ಮರಾಠೀ ವಾಜ್ಮಯ ದಲ್ಲಿ ನವಯುಗ ಪ್ರವರ್ಶಕಳೆಂಬ ಆದರೋತ್ಸಾಹೆಗಳಿಂದ ಸ್ವಾಗತಿಸಿದುದು, ಆದಕಿ ಅದರೊಡನೆಯೆ ಸನಾತನಿಗಳು ತಮ್ಮ ಜಡೆಯನ್ನೆ ಅಪ್ಪಳಿಸಿ, ಅವ ಳನ್ನು ಸ್ವೈರಿಣಿಯೆಂದು ಜರೆದು, ಅವಳ ಪುಸ್ತಕಗಳೆಂದರೆ ಫೀತಿಗೆ ಸಮಾಜ ಸ್ವಾಸ್ಥ್ಯಕ್ಕೆ ಕೊಡಲಿಯ ಪೆಟ್ಟುಗಳೆಂದು ಪ್ರತಿಪಾದಿಸಿ, ಬಹಿಷ್ಕಾರ ಹಾಕಿದ ರಿಂದರೆ ನಮ್ಮಲ್ಲಿಯಂತೂ ಅನೇಕರಿಗೆ ಆಶ್ಚರ್ಯವಾಗುವ ಕಾರಣವಿಲ್ಲ.

14

ಪ್ರಸ್ತುತ ಕಾದಂಬರಿಯನ್ನು ಭಾಷಾಂತರಿಸಿದನೆಂತರೆ ನಾನು ನನ್ನ ಹಸ್ತಲಿಖಿತವನ್ನು ಕೆಲವು ಮಿತ್ರರಿಗೆ ಓದಿ ಕೋರಿಸುವ ಸಾಹಸ ಮಾಡಿದೆ. ಅದರಲ್ಲಿ ಚಿಕ್ಕವಧಿದ್ದಾಗಿನಿಂದ ನನ್ನಲ್ಲಿ ಆಸ್ಥೆ ವಹಿಸಿದ ನಮ್ಮ ಕಡೆಯ ಹಿರಿಯರಿಗೆ ವಿಷಯವನ್ನು ಕಿಳಿಸಿದಾಗ ಸ್ವಾಭಾವಿಕವಾದ ನನ್ನ ಮೇಲಿನ ಪ್ರೇಮದಿಂದ ಅವರು, ಅಹುದೋ, ನೋಡೋಣ. ಯಾವ ಕಾದಂಬರಿ?” ಎಂದರು. ನಾನು ಇದ್ದುದನ್ನು ಹೇಳಿಜಿ. ಮರಾಠಿಯೆಂದಾಗಲೇ ಅವರು ಸ್ವಲ್ಪ ಅಸಮಾಧಾನಿಸಿದರು. ಕಾದಂಬರಿ ಕೇವಲ ಮೂಲ ಮರಾಠಿಯಾಗಿ ತ್ರೆಂಬುದಕ್ಕಲ್ಲ. ನಾನು ಅವರಿಗೆ ಅಲ್ಪಮಟ್ಟಿಗೆ ಕಥಾವಸ್ತುವಿನ ಪರಿಚಯ ಮಾಡಿಕೊಟ್ಟಿದ್ದೆ. ಮರಾಠೀ ಜನ ಪಾಶ್ಚಾತ್ಯ ವಿಚಾರಗಳ ಸಂಪರ್ಕ ದಿಂದ ಕೆಟ್ಟುಹೋಗಿದ್ದಾರೆ ; ನಮ್ಮಷ್ಟು ನೀತಿ-ಸಂಸ್ಥತಿಗಳೆ ಅಭಿಮಾನ ಅವರೆಲ್ಲಿಲ್ಲ” ಎಂಬ ಭಾವ ಅದರಲ್ಲಿತ್ತು. ಕೊನೆಗೆ ಮುಂದೇನಿದೆ ಎಂದರು, ಕತೆಯನ್ನೆಲ್ಲ ವಿವರಿಸಿದೆ. ಅಚಲೆಯ ಮನದ ಹೊಯ್ದಾಟಓವನ್ನಷ್ಟೇ ಚಿತ್ರಿಸಿದ್ದಾದರಿ ಅವಕೊಪ್ಪಬಹ:ದಾಗಿತ್ತೋ ಏನೋ. ಆದರೆ ಸರಿತ್ಯಕ್ತೆ ಯೊಬ್ಬಳು ಪರಪುರುಷನೊಬ್ಬ ನೊಡನೆ ಇದ್ದುಬಿಡುವಳೆಂದು ಪ್ರತಿಪಾದಿಸುವ ಕಲ್ಪನೆಯೇ ಅವರಿಗೆ ಸಹನವಾಗಲಿಲ್ಲ. ನಮ್ಮ ವಾಚಕವರ್ಗವೆಲ್ಲ ಇದೇ ಅಭಿಪ್ರಾಯದವರೆಂದಲ್ಲ. ಆದರೆ ಹೆಚ್ಚುಕಡಿಮೆ ಮಾತು ಬರಡೆ ಇರದೆಂದೆಸ್ಸ್ಟಿಸುತ್ತದೆ. ಶಿವರಾಮ ಕಾರಂತರ ಮೇಲೆ, ಗೋಕಾಕರ ಮೇಲೆ ಅಶ್ಲೀಲತೆಯ ಆರೋಪ ಬಂದುದು ನನಗೆ ನೆನಪಿದೆ. ಒಬ್ಬ ವ:ಹಾಶಯರಂತೂ Lawrences " Lady Chatterley’s Lover’ ವನ್ನೂ ಎಳೆದು ತಂದಿದ್ದರು "Lady Chatterley’s Lover ’ದ ಕತೆ ಹೀಗಿದೆ:

ಮದುವೆಯಾದ ಕೆಲವು ದಿನಗಳಲ್ಲಿಯೇ ಯುದ್ಧ ಭೂಮಿಗೆ ತೆರಳಿದ ಮೂರು ವರ್ಷಗಳ ನಂತರ ಯುದ್ಧದಲ್ಲಿ ಪೆಟ್ಟು ತಿಂದು ಕೆಳಗಿನ ಅರ್ಧ ಭಾಗವೆಲ್ಲ ಬಧಿರವಾಗಿ Lord Chatterley ಬೀದಿಯಿಗುತ್ತಾನೆ ಯಂತ್ರದ ಗೊಂಬೆಯಾನ ಅವನೊಡನೆ ಆಮರಣ ಕೂಡಿರಬೇಕಾಗಿ ಬಂದ ತರುಣಳಾದ Lady Chatterley ಬೇರೊಬ್ಬನೆಡೆಗೆ ಎಳೆಯಲ್ಪಡುತ್ತಾಳೆ. ಎರಡನೆ ಯವನು Chatterley ಮನೆತನದ ಅಡವಿಯ (Wooded Forest) ವ್ಯವಸ್ಥೆ ನೋಡುವನ. ಇವನೊಬ್ಬ ವಿಚಿತ್ರ ಪ್ರಾಣಿ. ಸೈನ್ಯದಲ್ಲಿ ಕೆಲಸ

]5

ಕ್ಕಿದ್ದಾಗೆ ಜಗತ್ತಿನ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿ ಅನೇಕ ತರಹ ಅನುಭವ ಪಣೆದು, ಜಗದ ಜನರ ಕೀಳ್ರನ್ನ ಮೂರ್ಬತನ, ದಬ್ಬಾಳಿಕೆ ಎಲ್ಲವುಗಳಿಗೆ ಬೇಸತ್ತು ಇಲ್ಲಿ ಶಾಂತವಾಗಿ ಅಡವಿಯ ವ್ಯವಸ್ಥೆ ಕೋಡುವ ಕೆಲಸ ಸಿಕ್ಕಾಗ ಅಡವಿಯಲ್ಲಿಯೇ ಮನೆ ಕಟ್ಟಿಕೊಂಡು ಒಂಓ ಜೀವನದಲ್ಲಿ ಸುಖಸಮಾಧಾನಗಳನ್ನು ಕಾಣುವವ. ತನ್ನ ಒಡೆಯನ ಹೆಂಡತಿ ತನ್ನೊಡನೆ ಬೇಟ ಬೆಳಸುವ ಮನಸ್ಸು ತೋರಿದಾಗ ಗಾಬರಿಗೊಳ್ಳುವ ; ಕೇವಲ ಒಡೆಯನ ಹೆಂಡತಿಯೆಂದಲ್ಲ. ಆದರೆ ಸುಳ್ಳು ಪ್ರೇಮ, ಗತಿಗೆಡಿಸುವ ಕಾಮುಕತೆಯ ವಿಷಯದ ಅನುಭವಪೂರ್ಣವಾದ ಉದಾಸೀನತೆಯಿಂದ, ಕೊನೆಗೆ ಅವಳನ್ನು ಅವನು ಸಮಿಾಪದಲ್ಲಿ ಬರಗೊಟ್ಟಾಗಲ್ಲೂ ಅವನು ಉದಾಸೀನನಾಗಿಯೇ ಇರುತ್ತಾನೆ. ಅಂಡಲೆಯುವ?ದೆಂದರೆ (Philandering) ತನಗಾಗದೆಂದು ಅವನು ಅವಳಿಗೆ ಬರೆದ ಕೊನೆಯ ಪತ್ರದಲ್ಲಿ ಹೇಳುತ್ತಾನೆ. ಅವರೀರ್ವರ ನಡುವಿನ ಕೆಳಗಿನ ಸಂಭಾಷಣೆ ಯನ್ನು ನೋಡಬಹುದು.

ಅವನು ತೀರ ವಿಚಾರಮಗ್ನನಾದುದನ್ನು ನೋಡಿ ಅವಳಿಗೆ ಹೆದರಿಕೆ ಯಾಯಿತು. ನಿಷ್ಕಾರಣವಾಗಿ ಅವನು ಸಾಶಂಕನಾಗುವುದನ್ನು ಕಂಡು ಅವಳಿಗೆ ಅಸಮಾಧಾನವೆನ್ನಿಸಿತು. ಯಾಕೆ? ಯಾಕೆ, ಸಂಶಯ? ತನ್ನ ಪ್ರೇಮ ಸುಳ್ಳಾದುದೆಂಜಿನಿಸಿತೆ ಅವನಿಗೆ?

ಆದರೆ ನಿನಗೆಂದೂ ನಿನ್ನೆ ನ್ನೊಲಿದು ಬಂದ ಸ್ತ್ರೀಯರ ನೆಚ್ಚಿಗೆ ಯೆನಿಸಲೇ ಇಲ್ಲವಲ್ಲವೆ? ಈಗಲೂ ಕೂಡ ನನ್ನಲ್ಲಿ ನಿನಗೆ ವಿಶ್ವಾಸವಿಲ್ಲ? ಅವಳೆಂದಳು,

ಕೆ ಸ್ತ್ರೀಯನ್ನು ನೆಂಬಿರುವಡೆಂದಕೇನೆಂಬುಡೀ ನನಗೆ ಗೊತ್ತಿಲ್ಲ”

ಹಾಂ. ಅಬೇ ನಾನು ಹೇಳಿದುದು!”

ಅವಳು ಅವನ ಹತ್ತಿರನೇ ಮುದುಡಿ ಕುಳಿತಿದ್ದಳು. ಆದರೆ ಅವನ ಮನಸ್ಸು ಅಲ್ಲಿರಲೇ ಇಲ್ಲ ಅವನೇನೋ ವಿಚಾರ ಮಾಡುತ್ತಲಿದ್ದ. ಅವನಿಗೆ ಅವಳೆಂದುದರ ಪರಿವೆಯೇ ಇದ್ದಂತೆ ತೋರಲಿಲ್ಲ. ಅವನೆ ಮನಸ್ಸು ಇನ್ನೂ ಓಡಿ, ಓಡಿ ದೂರವಾಗುತ್ತಿತ್ತು.

16

* ಹಾಗಾದರೆ ನಿನ್ನ ಅನ್ನೋಣವಾದರೊ ಏನು? ನಿನಗೆ ಯಾವ ತರದ ಸಂಬಂಧದಲ್ಲಿ ನಿಶ್ವಾಸವುಂಟು?”

ನನಗೇನೂ ಗೊತ್ತಿಲ್ಲ.”

ನೀವೆಲ್ಲರೂ ಹಾಗೇ, ಗಂಡಸರು” ಅವಳೆಂದಳು.

ಅವರಿಬ್ಬರೂ ಕೆಲಹೊತ್ತು ಮೌನವಾಗಿದ್ದರು. ನಂತರ ಒಮ್ಮೆರೆ ಎಚ್ಚತ್ತು ಅವನು ನುಡಿದ.

ನನಗೆ ಒಂದು ಮಾತಿನಲ್ಲಿ ವಿಶ್ವಾಸವಿದೆ. ಹೃದಯದ ನಿಜವಾದ ಸ್ನಿಗ್ಧ ತೆಯಲ್ಲಿ ಅಂಥ ನಡತೆಯಲ್ಲಿ ನನಗೆ ನಿಶ್ವಾಸವಿದೆ. ಪ್ರೇಮ ಮನಸ್ಸು ತುಂಬಿ ಬರಬೇಕು. ಅಂದರೇ ಅದು ಪ್ರೇಮ. ಅಂತಹೆ ತುಂಬಿದ ಹೃದಯ ವನ್ನು ಮಾತ್ರ ನಾನು ಪ್ರೀತಿಸ£ಲ್ಲೆ; ಸ್ತ್ರೀ-ಪುರುಷರು ಸತ್ಯವನ್ನು ಅರಿತು ಅದರಂತೆ ನಡೆದಾಗ, ಳಪಟವನ್ನುಳಿದು ನಡೆದಾಗ, ಕೃತ್ರಿಮತೆ ದೂರವಾಗಿ ಜೀವನಕ್ಕೆ ಸಾರ್ಥಕತೆಯೊದಗೀತು ಅಂದಿಗೇ ಎಲ್ಲ ಸಮಸ್ಯೆ ಗಳೂ ಬಗೆಹರಿವದುಂಟು. ಇಲ್ಲವಾದರೆ ಇದ್ದೇ ಇದೆಯಲ್ಲ, ಯಾವದೊಂದು ಕಟ್ಟಿಗೆ ಸಿಕ್ಕಿಬಿದ್ದು ಪ್ರೇಮವಿಲ್ಲದೆಯೇ ಕೂಡಿ ಬದುಕುವದು. ಅದೇ ಜೀವನ್ಮರಣ.”

ಇದೆಲ್ಲ ಚಿತ್ರಣದ ಭಾಗವನ್ನು ಗಣನೆಗೆ ತಂದುಕೊಳ್ಳದೆ ಕತೆಯ ಬಾಹ್ಯರೇಸೆಗಳನ್ನ ಸ್ಟೇ ಕಣ್ಣೆದುರಿಗಿರಿಸಿ ಸಾಂಪ್ರದಾಯಿಕವೋ, ದುರಾಗ್ರಹ ಪೂರ್ಣವೋ ಆದ ಕಲ್ಪನೆಗಳ ಚೌಕಟ್ಟನಲ್ಲಿಟ್ಟು ನೋಡಿ, ಅಭಿಪ್ರಾಯ ವ್ಯಕ್ತಮಾಡುವವರಿಗೆ ಏನೂ ಹೇಳಲು ಬಾರದು. ತಲೆತಲಾಂತರದಿಂದ ನಡೆದು ಬಂದ ವಿಧಿನಿಷೇಧಗಳು ಉಲ್ಲಂಫಿಸಲ್ಪಟ್ಟಿಲ್ಲಿ ಕೆಂಡ ಕಾರುವ ತಂಡ ಪ್ರಮುಖರ ಕಣ್ಣುಗಳ ಪ್ರಖರತೆ ಹೊಸದಲ್ಲ.

ಆದಕೆ ವಿಭಾವರೀಬಾಯಿಯವರೆ ಕಾದಂಬರಿಗಳಲ್ಲಿ ಕಂಡುಬರುವ ಮನೋವೃತ್ತಿಯ ವಿಷಯವಾದ ನ್ನೊ ೦ದು ಮಹೆತ್ವಪೊರ್ಣವಾದ ಬೀಕೆಯಿದೆ. ಅಡೀ ದೀರ್ಥವಾದ ಸಮಾಲೋಚನೆಗೆ ಮೂಲಕಾರಣ ವಾಯಿತೆಂದು ಹೇಳಬಹುದು. ಅದೆಂದರೆ ಅವರ ಪುಸ್ತಕಗಳಲ್ಲಿ ಮಿತಿ ಮಾರಿ ತೂಗುವ ಮನದ ಉಯ್ಯಾಲೆಯ ಏರಿಳಿತಗಳ ಶಲೆತಿರುಗಿಸುವ ಜೀಕುಗಳು; ಒಂದು ತರದ ನೆಲೆಯಿ-ಲ್ಲದ ಉದ್ವಿಗ್ನತೆ, ತೊಡಕು ತೊಡಕಾಗಿ

37

ಹೋದ ಮನದ ಎಳೆಗಳು ನಿಂತಲ್ಲಿ ನಿಂತಿರೆಡೆ, ಕುಳಿತಲ್ಲಿ ಕುಳಿತಿರದೆ, ಒಂದೇ ಸವನೆ ಕುಣಿವ ಪೋರಿಯನ್ನು ಹಿಡಿದು ತಂದ್ಳು ಕೆದರಿದ ತಲೆಯನ್ನು ಕಷ್ಟ ಪಟ್ಟು ಬಾಚಿ ಸರಿಪಡಿಸಿ, ಇನ್ನು ಓರಣವಾಗಿಟ್ಟುಕೊಳ್ಳ ಬೇಕು, ಹಾಂ” ಎಂಜೆಷ್ಟೇ ಕಿಳಿಹೇಳಿದರೊ ಮರುದಿನೆ ಅಜೀ ಕೆದರಿದ ತಲೆಯನ್ನು ಸರಿ ಪಡಿಸುವ ಕೆಲಸನಿಜ್ನೀ ಇಡಿ. ಒಮ್ಮೊಮ್ಮೆ ದಿನವೆಲ್ಲ ಕುಳಿತು ಅದರ ಎಳೆ ಎಳೆಗಳನ್ನು ತೊಡಕು ಬಿಡಿಸಿ, ಜೋಡಿಸಿ, ಎಣ್ಣೆ ಹಚ್ಚಿ ನೀವಿ, ನೀವಿ, ಸುಂದರವಾದ ಮುಡಿಗಟ್ಟದರೂ, ಮರುದಿನ ನಮೂನೆಯ ಮುಡಿಯವಳ ಮನಸ್ಸಿಗೆ ಬರುವದೇ ಇಲ್ಲ. ತನ್ನ ಮುಖದ ಮಾಟಕ್ಕೆ, ತನ್ನ ಒಲವಿನ ನೋಟಕ್ಕೆ ಒಪ್ಪುವ ನೀತಿಯೊಂದನ್ನು ಹುಡುಕುವ ಕೆಲಸ ಅವಳಿಗೆ ಮುಗಿಯದ ಕೆಲಸವಾಗುತ್ತದೆ. ಮೇಲೆ ಹೇಳಿದ ವಿಭಾವರಿಯ ಟೀಕಾ ಕಾರರು” ಎಂಬ ಪುಸ್ತಕದ ಸಂಪಾದಕರು ಎಲ್ಲ ಪ್ರಶ್ನೆಗಳ ನಿವೇಚನೆ ಯನ್ನು ಆಧಿಕಾರಯುತವಾಗಿ ಮಾಡಬಲ್ಲ, ಒಬ್ಬ ಮಹಾರಾಷ್ಟ್ರದ ಹಿರಿ ಲೇಖಕರ ಲೇಖನವೊಂದನ್ನು ಅದರಲ್ಲಿ ಹಾಕದೆ ಪುಸ್ತಕ ಪೂರ್ಣವಾಗ ದೆಂದು ಮನದಂದು ಮಹಾರಾಷ್ಟ್ರದ ಸ್ರಥಿತಯಶ ವಿಚಾರನಂತಕೆಂಜೆನ್ನಿಸಿ ಕೊಂಡ ಪ್ರೊಫೆಸರ ತ್ರ್ಯಂ.ಶಂ. ಶೇಜವಲಕರರನ್ನು ಕೇಳಿಕೊಳ್ಳಲಾಗಿ ಅವರು ಟೀಕಾತ್ಮಕ ಲೇಖನ ಸಂಕಲನಕ್ಕೆ ಮುನ್ನುಡಿಯೆಂಡೆನ್ನಿಸಬಹೆದಾದ ಒಂದು ಸಂಸ್ಕರಣೀಯವಾದ ಪ್ರದೀರ್ಫ ಲೇಖನವೊಂದನ್ನು ಬರೆದು ಅದರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಮಾಡಿದ್ದಾರಕೆ.

ಸುಮಾರು ೫೦ ವರ್ಷಗಳಿಂದೀಚೆಗೆ ಮಹಾರಾಷ್ಟ್ರದ ಸಾರಸ್ವತ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಮಾಜಿಕ ಕ್ಷೇತ್ರಗಳಲ್ಲಿ ನಡೆದ ಆಗು ಹೋಗುಗಳನ್ನು ಸಮಾಲೋಚಿಸುತ್ತ ಅವರು ವಿಭಾವರೀ ಶಿರೂರಕರವರು ಪ್ರತಿನಿಧಿಸುವ ಸಮಾಜವನ್ನೂ ವಿಚಾರ ಸರಣಿಯನ್ನೂ ಮಹಾರಾಷ್ಟ್ರಕ್ಕೂ ಹತ್ತಿದ ಕೊಳೆರೋಗವೆಂದು ಪ್ರತಿಪಾದಿಸಿದ್ದಾಕಿ. ಆದಕೆ ಒಂದು ಮಾತನ್ನು ಇಲ್ಲಿ ಸ್ಪಷ್ಟಗೊಳಿಸುವದೊಳ್ಳೆ ಯದು. ಪ್ರೊ. ಶೇಜವಲಕರರು ತಮ್ಮ ಪ್ರದೀರ್ಫೆ ವಾದ ಮಿತಾಮಾಂಸೆಯ ಆರಂಭದಲ್ಲಿಯೇ ತಮಗೆ ವಿಭಾವರಿಯವರ ಲೇಖ ನದ ಸಾಹಿತ್ಯಕ ಯೋಗ್ಯತೆಯನ್ನು ಕುರಿತು ಹೇಳಬೇಕಾದುದೇನೂ ಇಲ್ಲ ವೆಂದೂ, ತಮ್ಮ ವಿಚಾರಗಳು ಅವರ ಪುಸ್ತಕಗಳಲ್ಲಿ ಪ್ರತಿಫಲಿತವಾದ

18

ಸಾಮಾಜಿಕ ರೃಷ್ಟಿಕೋನಕ್ಕೆ ಮಾತ್ರ ಸಂಬಂಧಿಸಿದದಾಗಿದೆಯೆಂದು ಸ್ಪಷ್ಟ ಗೊಳಿಸಿದ್ದಾರೆ. ಅವರ ವಾದದ ಮುಖ್ಯಾಂಶಗಳು ಕೆಳಗಿನಂತಿವೆ. (ಇದನ್ನು ನಾನು ಬರೆಯುತ್ತಿರುವಾಗ ಪ್ರೊ. ಶೇಜನಲಕರರ ಲೇಖನ ನನ್ನಲ್ಲಿ ಇಲ್ಲ. ಆದರೆ ಅವರ ಹೇಳಿಕೆಯನ್ನು ಆದಷ್ಟು ಮಟ್ಟಿಗೆ ಅವರ ಮಾತಿನಲ್ಲಿ ಸಾರಾಂಶ ರೂಪವಾಗಿ ಕ್ರೋಡೀಕರಿಸಿದ್ದೇನೆ.

ಕಳೆದ ಕೆಲವು ದಿನಗಳಲ್ಲಿ ಮೂವರು ಬೆಳಕಿಗೆ ಬಿದ್ದ (Adolescent) —ಶೇಜವಲಕರರೆವಕೆ ಇಲ್ಲಿ "ವಾಢಾಳೂ' ಎಂಬ ನಾನೀನ್ಯ ಪೂರ್ಣವಾದ ಪದವನ್ನುಪಯೋಗಿಸಿದ್ದಾರೆ.) ಮಹಾರಾಷ್ಟ್ರ ಕನ್ನಿಕೆಯರು ಸಹಜಗತಿಯಿಂದ ನನ್ನ ದೃಷ್ಟಿ ಸಥದೆದುರು ಬಂದರು. ಮೂವರು ಕಳೆದ ೨೫-೩೦ ವರ್ಷ ಗಳ ಮಹಾರಾಷ್ಟ್ರದ ಸಾಂಸ್ಥುಕಿಕ ಜೀವನ ಮೂರು ಪ್ರವಾಹಗಳನ್ನು ಪ್ರತಿ ನಿಧಿಸುತ್ತಾರೆಂದು ಸಾಮಾನ್ಯವಾಗಿ ಹೇಳಬಹುದು.

ಇವರಲ್ಲಿ ಒಬ್ಬಳ ಶಿಕ್ಷಣ ಮುಂಬಯಿಯಲ್ಲಿ ಆಯಿತು. ಅಲ್ಲಿ ಅವಳು ಮುಂಬಯಿಯ ಶ್ರೀಮಂತಿಕೆಗೆ ಒಲಿದುಹೋಗಿಬಿಡಬಹುದೆಂದೆನ್ಸಿಸಬಹು ದಾಗಿತ್ತು. ಆದರೆ ಅವಳು ಗುಜರಾಧೀ ಥಧ್ರೇಯವಾದದ ಸಂಸರ್ಕಗೊಂಡು ಅದೇ ಪ್ರಭಾವಿಯಾದ ಥ್ರೇಯವಾದದೊಡನೆ ತೇಲಿ ಮುನ್ನಡೆದು ಮುಂದಿ ತನ್ನ ನಂಬಿಕೆಗೆ ಸಾಕಾರತೆ ಕೊಡಲು ಮಹಾತ್ಮರ ಆಶ್ರಮವನ್ನೇ ಸೇರಿ, ಕಡುತರವಾದ ವ್ರತಸ್ಥ ಆಯ:ಸ್ಯಕ್ಕೆ ತನ್ನ ಜೀವನವನ್ನೇ ಮಾಸಲಾಗಿಟ್ಟು ಸಾರ್ಥಕತೆಯ ದಾರಿಯನ್ನು ಕ್ರಮಿಸಲಾರಂಭಿಸಿದಳು. ಅವಳ ಹೆಸರು ಪ್ರೇಮಾ ಕಂಟಕ " ಕಾಮ ಆಣಿ ಕಾಮಿನೀ' ಎಂಬ ಅವಳ ಕಾದಂಬರಿ ಪ್ರಸಿದ್ಧವಾಗಿದೆ. ಮೊನ್ನೆಯೇ ಬಂದೆ ಅವಳ "ಭ್ರಾಂತ ಜೀವನವೆಂಬ ಕೃತಿಯೂ ಅವಳ ಧ್ಯೇಯದಿಂದ ಪವಿತ್ರವಾದ ದೃಷ್ಟಿಯನ್ನೇ ಇನ್ನಿಷ್ಟು ಸ್ಪಷ್ಟವಾಗಿಸಿದೆ. ಇನ್ನೊಬ್ಬಳು ಮೂಲತಃ ಶ್ರೀಮಂತಳು. ಆದರೆ ಮುಡಿದು ದುಡಿದು ತಿನ್ನುವ ಕಾರ್ಮಿಕರ ಜೀವನ ಸಂಗ್ರಾಮದ ಸಾಮೂಹಿಕ ಯತ್ನದ ಕರೆಗೆ ಓಗೊಟ್ಟು, ತನ್ನ ಶ್ರೀಮಂತಿಕೆಯನ್ನು ಬಿಸುಟು ನಡೆದಳು. ತನ್ನ ಥ್ಯೇಯವನ್ನ ನುರಿಸಿ ನಡೆಯುವ ಒಂದು ವಿಶಿಷ್ಟ ಜೀವನ ಸರಣೆ ಯಿಂದ ಮಹಾರಾಷ್ಟ್ರಕ್ಕೆ ಅವಳೂ ಸರಿಚಿತಳಾಗಿದ್ದಾಳೆ. ಅವಳೇ ಮಹಾ ರಾಷ್ಟ್ರದ ಹಳೆಯ ಕಮ್ಯುನಿಸ್ಟ್‌ ಕಾರ್ಯಕರ್ತರಲ್ಲಿ ಗಣಿಸಲ್ಪಡುವ ವಿನಾನಾಕ್ಸಿ

19

ಕರಾಡಕರ. ಮೂರೆನೆಯವಳು ಪುಣೆಯವಳು. ಸ್ವಾಭಾವಿಕವಾಗಿ ಮರಾ ಶರ ಕೆಚ್ಚು ಇವಳಲ್ಲಿ ಕಾಣಬಹುದಾಗಿತ್ತೆಂದು ಯಾರೂ ಅಪೇಕ್ಷೆ ಮಾಡ ಬಹುದಾಗಿತ್ತು ಆದರೆ ಇವಳೊ? ಕೇವಲ ತನ್ನ ವೈಯುಕ್ತಿ ಕವಾದ ಅಶೆ ಇಚ್ಛೆಗಳನ್ನೇ ದೇವರೆಂದು ಭಾವಿಸಿ, ಅವುಗಳ ನಿರಂಕುಶವಾದ ಪ್ರದರ್ಶನ, ಪೂರ್ತಕೆಗಳಲ್ಲಿಯೇ ವ್ಯಕ್ತಿತ್ವ್ವದ ಸಾರ್ಥಕತೆಯನ್ನು ಕಾಣಲು ಹವಣಿಸಿ ದಳು. ಅವಳು ಬಾಳಿನ ಪ್ರಶ್ನೆಗಳು ನೀಡಿಸಿದ್ದು ಇದೊಂದು ರೀತಿಯಲ್ಲಿ ಮಾತ್ರ. ಅದಕ್ಕಿಂತ ಯಾನ ಹೆಚ್ಚಿನ ಸತ್ಯವೂ, ಪ್ರಶ್ನೆಯೂ ಅವಳಿಗೆ ಎದುರಾದಂತೆ ತೋರುವುದಿಲ್ಲ. ಆದ್ದರಿಂದಲೇ ವಿಕೃತಿ ಪಡೆದ ನಿಷ್ಕರ್ಮಕ ವಾದ ಮನದ ಚೇತ್ಕಾರವೇ ೬ವಳೆಲ್ಲ ಲೇಖನದಲ್ಲಿಯೂ ಕೇಳಬರುತ್ತದೆ. ಇವಳೇ ನಮ್ಮ ಬಾಳುತಾಯಿ ಖರೆ -ಮಾಲತಿಬಾಯಿ ಬೇಡೇಕರೈ, ವಿಭಾ ವರೀ ಶಿರೂರಕರ.

ಇಂತಹ ಕೇವಲ ಸ್ವಳಲ್ಪಿತ ಸಮಸ್ಯೆಗಳ ತೊಡಕಿನಲ್ಲಿಯೇ ಒದ್ದಾ ಡುವ Petty Bowrgeois ಎಂದು ಮಾರ್ಕ್ಸಿಸ್ಟ ಸಂಪ್ರದಾಯಿಗಳು ನಿರ್ದೇಶಿಸಬಹುದಾದ ಸ್ವಭಾವ ಚಿತ್ರಗಳನ್ನೇ ಮಾಡುವ ಸ್ತ್ರೀಯನ್ನು ನವಯುಗ ಪ್ರವರ್ತಕಳ ಪಟ್ಟಕ್ಕೆ ಕುಳ್ಳಿರಿಸಿ ಅವಳೆ ಗುಣಗಾನದಲ್ಲಿ ನಾನು ಮುಂಜಿ ತಾನು ಮುಂಜೆಯೆಂದೆನ್ನುವ ಮಹಾರಾಸ್ಟ್ರದ ಪ್ರಥಿಶಯಶರಾದ ವಿಮರ್ಶಕರನ್ನು ವಿಭಾವರೀ ಶಿರೂರಕರರ ಲೇಖನಕ್ಕೆ ಮನಸೋತು ಮುಕ್ತ ಕಂಠದಿಂದ ತಮ್ಮ ಮೆಚ್ಚಿಕೆಯನ್ನು ವ್ಯಕ್ತ ಪಡಿಸಿದ ಅನೇಕ ಪ್ರಥಮ ದರ್ಜೆಯ ಮಹಾರಾಷ್ಟ್ರದ ಲೇಖಕರನ್ನು ಪ್ರೊಫೆಸರ ಶೇಜವಲಕರರು ಹೀಗೆ ಳೆದು ನುಡಿದಿದ್ದಾರೆ. ಮೊದಲೇ ಹೇಳಿದಂತೆ ನಿಭಾವರಿಯವರ ಲೇಖನದ ವಿಷಯವಾಗಿ ಪ್ರಸಿದ್ಧವಾದ ವಿಮರ್ಶೆಗಳ ಸಂಕಲನಾತ್ಮಕ ಗ್ರಂಥಕ್ಕೆ ಮುನ್ನು ಡಿರೂಪವಾಗಿ ಬರೆದ ಲೇಖನದಲ್ಲಿ ವಿಭಾವರಿಯವರ ಪುಸ್ತಕ ಗಳನ್ನು ಸ್ತುತಿಸಿದ ಇತರ ಲೇಖಕರನ್ನು ಕುರಿತು ಸ್ತ್ರೀಯ ಹಿಂದೋ ಡುವ ಕುರಿ ಮುಂದೆ?...(" ಲೊಂಢಾ' ಎಂಬ ತಿರಸ್ಕಾರ ಸೂಚಕ ಶಬ್ದ ವನ್ನು ಶ್ರೀ ಶೇಜವಲಕರರು ಉಪಯೋಗಿಸಿದ್ದಾರೆ) ಎಂಬ ಶಬ್ದಗಳಿಂದ ಸಂಬೋಧಿಸಿದ್ದಾರೆ. ಕು. ಕಂಟಕ ಅವರೇ ಆಗಲಿ, ನಿಾನಾಕ್ತಿ ಕರಾಡಕರರೇ ಆಗಲಿ ಒಂದಿಲ್ಲೊಂದು ಸಾರ್ಥಕತೆಯನ್ನು ಕಂಡುಕೊಂಡರು. ಆದರೆ

20

ವಿಭಾವರಿಯೊ? ತನ್ನ ಸ್ವೈರತೆಯ ನಗ್ನ ಪ್ರದರ್ಶನ ಮಾಡುತ್ತ, ಕೇವಲ ವೈಯಕ್ತಿಕ ಆಕಾಂಕ್ಷೆಗಳ ದಿಗ್ವಿಜಯಕ್ಕೆಂದು ನಡೆದಿರುವ ನಿರರ್ಥಕವಾದ ನಿರಂಕುಶವಾದ ಆತ್ಮ ಸಂಮೋಹನೆಯ ಪ್ರತಿಷ್ಠಾಪನೆ! ಆದರಿಂದ ಯಾರಿ ಗೇನು ಸುಖವಾದೀತು? ಯಾರ ಕಲ್ಯಾಣ ಸಾಧಿಸೀತು?

ಶ್ರೀ ಶೇಜವಲಕರರು ರೀತಿ ಪರೀಕ್ಷಣ ನಡೆಸಿದುವನ್ನು ನೋಡಿ ನಮ್ಮಲ್ಲಿಯ ಮಡಿವಂತರೂ ಕೂಡ ಬೆರಳು ಕಚ್ಚಬಹುದು. ಅವರು ದಾರುಣವಾದ ಮಾತುಗಳನ್ನು ಹೇಳುತ್ತಿರುವಾಗ ಅದಕ್ಕೆ ಅಲ್ಲಿಯ ವರೆಗಿನ ಮಾಮಾಂಸೆಯ ಪಾರ್ಶ್ವಭೂಮಿಯಾವುದೆಂದು ನಾವು ಹೇಳದೆ ಹೋದರೆ ಪುಸ್ತಕವನ್ನೊ (ದಿದ ನಮ್ಮಲ್ಲಿಯ ಸಹಾನುಭೂತಿಪರ ವಿಚಾರವಂತರು ಪ್ರೊಫೆಸರ ಶೇಜವಲಕರರಿಗೆ ವ್ಯಕ್ತಿಯ ನಿಜವಾದ ಸುಖಕ್ಕಿಂತ, ಅನೇಕ ಬಂಧೆನಗಳ ತೊಡಕಿಗೆ ಸಿಲುಕಿ ಒದ್ದಾಡುವ ಅವನ ಅಸಹಾಯತೆಯ ಪರಿ ಣಾಮಕಾರಕವಾದ ಚಿತ್ರಣಕ್ಕಿಂತ, ಕೇವಲ ಕಾಲ್ಪನಿಕವಾದ ಸಕಲರ ಸುಖ ಕೈಂದ, ಗಣವೇಷಧರಿಸಿ, ಎದೆಯುಬ್ಬಿಸಿ ಮುನ್ನಡೆನ " ಜನತೆಯ ಸೈನ್ಯ'ದ ಶಿಪಾಯಿಯ ಮೌಢೈಪೂರ್ಣವಾದ, ತನ್ನೆದಾಗಲಿ, ಸರರದಾಗಲಿ ಯಾವದರ ಹಂಗು ಇಲ್ಲದೆ ಹುಚ್ಚೆದ್ದ ತೊತ್ತಳದುಳಿತದ ಚಿತ್ರಣನೇ ಹೆಚ್ಚು ಪ್ರಿಯ ವಾಗಿದ್ದಂತೆ ತೋರುತ್ತದೆ ಎಂದೆನ್ನಬಹುದು. ಅಥವಾ ವಾಸ್ತವಿಕತೆಗೆ ಆರ ದಾಳವಿಕ್ಕಿ ಕಂಡದುನ್ನೆಲ್ಲ ನೋಡಿ ಅಳುವ, ಮೊದಲಿನಿಂದ ಕೊನೆಯವರೆಗೂ ಉಪಡೀಶಾಮೃತದಿಂದ ಮಕ್ಕಳಿಗೆ ಹೇಳುವ ನೀತಿ ಕತೆಗಳಿಂದ ತುಂಬಿದ 4 ಆದರ್ಶವಾದೀ' ಲೇಖನವೂ ಅವರಿಗೆ ಆದೀತೆನ್ನ ಬಹುದು, ಆದ್ದರಿಂದ ಅವರ ವಾದದ ಸಂದರ್ಭವನ್ನು ಇಲ್ಲಿ ಸ್ಪಷ್ಟಗೊಳಿಸುವುದು ಒಳಿತು. ಪ್ರೊ. ಶೇಜವಲಕರರು ಮಹಾರಾಷ್ಟ್ರದ ರಾಜಕಾರಣದಲ್ಲಿ ಲೋಕಮಾನ್ಯರ ನಂತರೆ ಅನರ ಅನುಯಾಯಿಗಳೆಂದು ಹೇಳಿಕೊಳ್ಳುವ ಒಂದು ಪಂಗಡದವರು ಯಾನ ಘಾತಕವಾದ ಪ್ರವೃತ್ತಿಗಳಿಗೆಜೆಮಾಡಿಕೊಟ್ಟರೆಂಬುದನ್ನು ವಿವೇಚಿ ಸುತ್ತ, ಮುನ್ನಡೆದಿದ್ದ ಜನ ಸಾಮಾನ್ಯರ ಸುಖದುಃಖಗಳಲ್ಲಿ ಸಹಭಾಗಿಗಳಾ ಗಡೆ, ಪ್ರಗತಿ ವಿರೋಧಿಗಳಾಗಿ, ತಾವೊಂದು ಘನ ಸಂಸ ತಿಯನ್ನು ಸಂರಕ್ಷಿ ಸುತ್ತಿದ್ದೇವೆಂಬ ಒಣ ಹೆಮ್ಮೆಯಿಂದ ಸ್ವಾರ್ಥದಾಟವನ್ನು ಹೂಡಿದ ಪಂಗಡ ವನ್ನು ಟೀಕಿಸುತ್ತ, ಅವರ ಅಹಂಮನ್ಯತೆಯ ಅತಿನ್ಯಕ್ತಿವಾದವೇ ಅದಕ್ಕೆ

21

ಮೂಲಕಾರೆಣವೆಂದೂ, ವಿಭಾವರೀಬಾಯಿಯವೆರೆ ಲೇಖನದ ವ್ಯ ಕ್ತಿಲ್ಲಿ ವಾದವೇ ಕಂಡು ಬರುತ್ತಿ ದ್ದು ದರಿಂದ ಅವೆರಡೂ ಒಂದೇ ಪ್ರವೃತ್ತಿಯ ದ್ಯೋತಕಗಳೆಂಬ ಸುಲಭವಾದ ಸವಿಖಾಕರಣವನ್ನು ಪ್ರತಿಪಾದಿಸಿದ್ದಾರೆ. ವ್ಯಕ್ತಿ ಕೊಡಬಲ್ಲ ಮಾತೇ ಅಷ್ಟು. ತನ್ನ ಬಂಗಲೆ, ತನ್ನ ರೇಡಿಯೋ, ಶನ್ನ ಪ್ಲಾಟ್‌, ತನ್ನ ಕಾರು, ಮತ್ತೆ ತನ್ನ ಭಾವನೆ ಮತ್ತು ತನ್ನ ಸುಖ ಎಂಬ ಸರಪಳಿಯಲ್ಲಿ ಸರ್ವಸ್ವವೂ ಆಡಕವಾದ " ಸದಾಶಿವಪೇಟಿ'ಯ ಸ್ವಾರ್ಥಾಂಧತೆಯನ್ನು ಜರೆದು ಅವರು ಹೇಳುತ್ತಾರೆ. * ಆದ್ದ ರಿಂದಲೇ ವೀರಲೇಲೆ ಸ್ವ ಷ್ಣ ಸಯೇ ನಿಭಾವರಿಯ ಪ್ರತಿಭೆ ತನ್ನ ಅಂತಿ ಸೀಮೆ ಯನ್ನು ಮುಟ್ಟಿ ಕಾಣುತ್ತದೆ. ಅಲ್ಲಿಗೆ ಗಳ ಅವಳ ಲೇಖನದ ರುರಿ ಮುಂಜಿ" ದಾರಿಗಾಣದಾಗಿದೆ.”

ಮೊನ್ನೆ ನಾನು ಪುಣೆಯಲ್ಲಿ ಲೆ. ಖಕಿಯರೊಡನೆ ಮಾತನಾಡುತ್ತಿದ್ದಾಗ ಪ್ರೊ. ಶೇಜವಲಕರರ ಮಾತು ಬಂದಿತು. ಆಗ ಮಿಂಚುಗಣ್ಣಿನ ವಿದುಷಿ ಯೆಂದಳು, ಅಹುದು. ನಾನು ಅವರ ಲೇಖನೆ ನೋಡಿದೆ. ಆದರೆ ಅದಕ್ಕೆ ಉತ್ತರವೆಂದೋ ಎಂಬ:ವಂತೆ ಅದೇ ಹೊತ್ತಿಗೆ ನನ್ನ ಬಳೀ” ಕಾದಂಬರಿ ಪ್ರಸಿದ್ಧವಾಯಿ:ಶು.? ಅವರ ಹೊಸ ಕಾದಂಬರಿ Criminal Tribes—— ಜಾಕಿಗಳ್ಳರೆಂದು ಹೆಸರಿರಿಸಿ, ಇಲ್ಲಿಯವರೆಗೂ ಮುಳ್ಳು ತಂತಿಯ ಬಂಧನದಲ್ಲಿ ಇಟ್ಟಿದ್ದ ಬೇಡರು, ಚಿಗರಿ ಬೇಟಿಗಾರರೇ ಮುಂತಾದ ಹಿಂದುಳಿದ ವರ್ಗ ದವರ ಜೀವನ ಚಿತ್ರಣವಾಗಿದೆ. ಪುಸ್ತಕವನ್ನು ಹಿಂದೀ ಕಮ್ಯುನಿಸ್ಟ ಪಕ್ಷದ ಮಹಾರಾಸ್ಟ್ರ ಶಾಖೆಯವರು ತಯಾರಿಸಿದ ತಮ್ಮ ಉತ್ತಮ ಪುಸ್ತಕ ಗಳ ಪಟ್ಟಿಯಲ್ಲಿ ಹಾಕಿದ್ದಾರೆಂದು ಅವರು ನನಗೆ ಹೇಳಿದರು. ಅದಕ್ಕೆ ಪ್ರೊ ಶೇಜವಲಕರರೇನು ಹೇಳುವರೋ ಗೊತ್ತಿಲ್ಲ.

ಯೂರೋಪಿನಲ್ಲಿ ಪ್ರಕಟಿವಾಗುತ್ತಲಿರುವ ಅತಿವ್ಯಕ್ತಿವಾದೀ ಕತೆ ಕಾದಂಬರಿಗಳ ವಿಷಯದಲ್ಲಿ ಮಾರ್ಕ್ಸಿಸ್ಟ್ಯ ವಿಮರ್ಶಕರ ಅಭಿಪ್ರಾಯಕ್ಕೂ ಪ್ರೊ. ಶೇಜವಲಕರರ ಅಭಿಪ್ರಾಯಕ್ಕೂ ಒಂದು ಅಪೂರ್ವವಾದ ಸಾದೃಶ್ಯ ವಿದೆ. ಅವರೆನ್ನುವ ಮಾತಿನಲ್ಲಿ ಕೆಲವಂಶದಲ್ಲಿ ಸತ್ಯತೆಯೂ ಇಲ್ಲದಿಲ್ಲ. ಆದರೆ ನಿಭಾವರೀ ಶಿರೂರಕರರ ಬರವಣಿಗೆಯಲ್ಲಿ ಪ್ರತಿಫಲಿತವಾಗುವ ವ್ಯಕ್ತಿ ವಾದಕ್ಕೂ, ಅತ್ಯಾಧುನಿಕ ನಿರಾಶಾವಾದಕ್ಕೂ ಬಹಳ ಅಂತರವಿದೆ.

22

ನವ ಸಾಮಾಜಿಕ ಸಂಬಂಧೆಗಳಿಂದ ಉದ್ಭೂತವಾದ ಮನೋವಿಕೃ ಕಿಯ ಅಭ್ಯಾಸ ಹೊಸ ಸಮಾಜ ಶಾಸ್ತ್ರದ (Sociology) ಒಂಡು ಅತ್ಯಂತ ಮುಖ್ಯ ಅಂಶವಾಗಿದೆ. ವಿಕೃತಿ ಕೇವಲ ಲೈಂಗಿಕ ಕಾರಣಗಳಿಂದ ಉದ್ಭೂತವಾದುದಷ್ಟೇ ಅಲ್ಲ ಹಳೆಯ ಸಮಾಜದ ಎಲ್ಲ ಕಟ್ಟಳೆಗಳನ್ನು ಜೈಿವಾಯತ್ತನೆಂದು ಮನ್ನಿಸಿ ಜೀವನೆ ಸಾಗುತ್ತಿದ್ದಾಗ, ಅಂದಿನ ದಿನದ ದಾರಿದ್ರ್ಯ ಮತ್ತು ದೇಹದಂಡನೆಗಳನ್ನು ಎದುರಿಸುವ ಮತ್ತು ಒಂದು ಕಟ್ಟು ನಿಟ್ಟಿಗೆ ಅನುಕೂಲವಾಗುವಂತೆ ತಮ್ಮ ಸ್ವಂತದ ಭಾವನಾ ಬುದ್ಧಿ ಗಳನ್ನು ಸಂವೇದನೆಗಳನ್ನು ಅಳವಡಿಸಿಕೊಳ್ಳುವದೇ ಸಮಸ್ಯೆಯಾಗಿದ್ದಾಗ, ವಿಕೃತಿಗಳುಂಟಾಗಬಹುದಾಗಿದ್ದರೂ. ಅವು ಇಷ್ಟು ತೊಡಕು ತೊಡಕಾದ ರೀತಿಯಲ್ಲಿ, ಇಷ್ಟು ಕೀವ್ರತೆಯಿಂದ ವ್ಯಕ್ತವಾಗುತ್ತಿರಲಿಲ್ಲ Coming of Age in Samoa—* ಸಾನೋಆ ನಡುಗಡ್ಡೆಗಳಲ್ಲಿ ಷೋಡಶ ವರ್ಷ ಎಂದ ತಮ್ಮ ಪ್ರಯಾಸಪೂರ್ವಕವಾಗಿ ತಯಾರಿಸಿದ ಗ್ರಂಥ ದಿಂದ ಆಧುನಿಕ je ಸ್ರಕ್ಕೂ ಬಹು ಮಹತ್ವ ಕೊಡುಗೆಯನ್ನು ಕೊಟ್ಟ ವರೆಂದು ಹೆಸರಾಂತ Mrs. Margaret Mead ಎಂಬ ವಿದುಃ ಮೊಸ್ನೆ ತಮ್ಮ Malo and Female—(‘ ಹೆಣ್ಣು ಗಂಡು?) ಸಿ 111 of Ae in the changing world ಬದಲುಗೊಳ್ಳುವ ೦ಗಿಕ ಸಮಸ್ಯೆಗಳನ್ನು ಕುರಿಶು') ಎಂಬ ತಮ್ಮ ಉದ್ದ )ಂಥವನ್ನು ಪ್ರಕ ಬಸ್ಕಿ ಭನ ಮತ್ತು ಅಭ್ಯಾಸ ಪೂರ್ಣವಾದ ದೃಷ್ಟಿ ಯಿಂದ ಎಲ್ಲ ತೊಡಕಿನ ಪ್ರ ಶ್ಲೆಗಳನ್ನು ಸಮಾಲೋಚಿಸಿ, ಕೆಲವೊಂದು ಮಹೆತ್ವದ ಮಾತು ಗಳನ್ನು ಹೇಳಿದ್ದಾರೆ. "ಪ್ಯಾಸಿಫಿಕ್‌ ಮಹಾ ಸಾಗರದಲ್ಲಿದ್ದ 4 ಸಾರೋ? ಎಂಬ ನಡುಗಡ್ವೆ'ಗಳಲ್ಲಿ ಸಾವಿರಾರು ವರ್ಷಗಳಿಂದ ನೆಡೆದು ಬಂದಿದ್ದ, ಸಾಮಾಜಿಕ ರೂಢಿ, ಸಂಪ್ರ ದಾಯಗಳನ್ನ ನುಸರಿಸಿಯೇ ಇನ್ನೂ ತಮ್ಮ ಜೀವನ ಸಾಗಿಸುವ, ಕೀರ ಹಳೆಯ, ಜನಾಂಗಗಳೊಡನೆ ಅನೇಕ ದಿಷೆಸವಿದ್ದ, ಅವರ ಲೈಂಗಿಕ ಸಾಮಾಜಿಕ ಸಂಬಂಧಗಳ, ನಡುವಳಿಕೆಗಳ ಕುರಿತು ಅವರು ತಮ್ಮ ಹಿಂದಿನ ಪುಸ್ತಕ ಪ್ರಸಿದ್ಧಿಸಿದರು. ಅವರು ಆಧುನಿಕ ಸುಧಾರಿಸಿದ ಸಮಾ ಜಗಳಾದ ಪಾಶ್ಚಾತ್ಯರ ಜೀವನ ಕ್ರಮದ ವಿನಯವನ್ನು ವಿವರಿಸುತ್ತ ಹೇಳಿದ ಮಾತುಗಳಲ್ಲಿ ತಮ್ಮ ಅಭಿಪ್ರಾಯವನ್ನು ರೀತಿ ವ್ಯಕ್ತಗೊಳಿ ಸಿದ್ದಾರೆ.

23

ಹಳೆಯ ಸಮಾಜಗಳಲ್ಲಿ ಸಾಮಾಜಿಕ ಸಂಬಂಧಗಳ ಒಂದು ಸ್ಥಿರತೆ ಇದ್ದಿತೇನೋ ನಿಜ. ಅದರಿಂದ ಇಂದಿನೆಂತಹ ತೊಡಕಿನ ಸಮಸ್ಯೆಗಳು ಹೆಚ್ಚಾಗಿ ಆಗ ಕಂಡು ಬರಲಿಲ್ಲವೆಂಬುದೂ ನಿಜ. ಆದರೆ ಆಗ ಓಂದು ತರದ ಸ್ಥಿರತೆ ಮನದ ಸ್ವಾಭಾವಿಕವಾದ ಸಂಯಮ ಅದರಿಂದಾಗಿ ಕೆಲವೊಂದು ಸುಖ--ಸಮಾಧಾನಗಳು ನೆಲೆಸಲು ಸಹಾಯಕವಾಗಿದ್ದರೂ, ಸಮಾಜ ಗಳಲ್ಲಿ ಶೇಕೃಪೀಯರ್‌ ಕೀಟ್ಸಿರಂತಹ ಕವಿಪುಂಗವರಾಗಲಿ, ನ್ಯೂಟನ್‌ ಮೆರಿ ಕ್ಯೂರಿಯಂತಹೆ ಶಾಸ್ತ್ರ ಜ್ಞರಾಗಲಿ, ಫ್ರಾಯ್ಡ, ಡಾರ್ವಿನ್ನರಾಗಲಿ ಜನ್ಮಿಸು ವದು ಸಾಧ್ಯವೇ ಇಲ್ಲ. ಇಂತಹ ಸಂಸ್ಕತಿಯ ಪರಮೋಚ್ಛ ಕಳೆಸಗಳನ್ನು ನಾವೆಂದಿಗೂ ಅಲ್ಲಿ ಕಾಣಲಾರೆವು. ಮನದ ಹೊಯ್ದಾಟಗಳ ವೇದನೆಗಳಿ ಲ್ಲಡ್ಮೆಸಂಸ್ಕೃತಿಯ ಜನನವಾಗಲಾರದು. ನಮ್ಮ ತೊಡಕಿನ ಪ್ರಶ್ನೆಗಳು ನಮ್ಮ; ನಿರಾಶರನ್ನಾಗಿ ಮಾಡುವ ಕಾರಣವಿಲ್ಲ. ಆಧುನಿಕ ಪಾಶ್ಚುತ್ಯ ಸಮಾಜಗಳು-ಅಮೇರಿಕೆ ಮೊದಲುಗೊಂಡು-ಹೀನಾಯದ (Decadence) (ದಾರಿ ಹಿಡಿದೆವೆಯೆಂದಾಗಲಿ, ಭ್ರಷ್ಟವಾಗಿ ಅಗತಿಕವಾಗಿವೆ (1618766) ಎಂದಾಗಲಿ ಹೇಳಲು ಬಾರದು.

ಮಿಸೆಸ್‌ ಮಾರ್ಗಾರಿಟ್‌ ಮಾಡರ ಹೊಸ ಪುಸ್ತಕದ ವಿವೇಚನೆಯ ಪಾಂಡಿತ್ಯಪೂರ್ಣ ಪ್ರತಿಭೆಯ ಆಳ, ವಿಸ್ತಾರ ಎತ್ತರಗಳು " ಮನುಷ್ಯ ವಿಜ್ಞಾನ' (5019806 01 ಖan)ನನ್ನೇೇ ತವ್ಮ ನಿಷಯವನ್ನಾಗಿಸಿನೆ ಯೆಂದು ಸೂಕ್ಷ್ಮದರ್ಶಿಗಳಾದ ಸಮಾಲೋಚಕರು ಅಭಿಪ್ರಾಯ ವ್ಯಕ್ತಮಾಡಿ ದ್ದಾರೆ. ಹೋದ ವರ್ಷದ The world Review ಎಂಬ ಬ್ರಿಟಿಶ್‌ ಮಾಸಿಕದ ಸಂಚಿಕೆಯೊಂದರಲ್ಲಿ ವಿಷಯವಾಗಿ ಪ್ರಸಿದ್ಧವಾದ, The Price of culture ಎಂಬ ನಿಚಾರಪರಿಪ್ಲು ತವಾದ ಲೇಖನದೆಜೆಗೆ ಇಲ್ಲಿ ಸೂಜ್ಞರಾದ ವಾಚಕರ ದೃಷ್ಟಿಯನ್ನೆಳೆಯದೆ ಇರಲಾರೆ. ದೃಷ್ಟಿಯಿಂದ ನಿಭಾವರೀಬಾಯಿಯವರ ಬರವಣಿಗೆಯನ್ನವಲೋಕಿಸಿ ಅಭಿಪ್ರಾಯ ಕೊಡುವ ಕೆಲಸವು ಇನ್ನೂ ಆಗಬೇಕಾಗಿದೆ.

ನನನಿಚಾರೆ ಪ್ರವರ್ತಕರ ತವರಾದ ಸೋನಿಯೆಟ್‌ ಯೂನಿಯನ್ನಿ ನಲ್ಲಿಯೇ ಕ.ಟುಂಬವನ್ನು ಮತ್ತೆ ಮೊದಲಿನಂತೆ ಪ್ರಸ್ಥಾಪಿಸುವ ಪ್ರಯತ್ನ ಗಳು ನಡದಿನೆ; ಅದು ಆಧುನಿಕ ಸಮಾಜಶಾಸ್ತ್ರಕ್ಳೆ ಪಾಠ ಕಲಿಸದೆ

24

ಹೋದರೆ ಇನ್ನಾವದು ಕಲಿಸಬೇಕು ಎಂಬ ಇನ್ನೊಂದು ಯುಕ್ತಿವಾದೆವೂ ಅಗಾಗ ಕೇಳಬರುತ್ತಡೆ. ಆಧುನಿಕ ಪಾಶ್ಚಾತ್ಯ ಸಮಾಜಶಾಸ್ತ್ರವು ಸೋವಿ ಯೆಟ್‌ ರಾಷ್ಟ್ರದಲ್ಲಿ ತಲೆಯೆತ್ತಿರುವ 4 ಹೊಸ ಅನಾಗರಿಕತೆಯ' (Neo- babarianism) ವಿಶ್ಲೇಷಣವನ್ನೂ ಎಷ್ಟು ಪರಿಣಾಮಕಾರಿಯಾಗಿ ಮಾಡುತ್ತಿದೆಯೆಂಬುದು ಇನ್ನೂ ನಮ್ಮಲ್ಲಿ ಅನೇಕರಗೆ ಪರಿಚಯವಾಗಿಲ್ಲ. ದಿನ ದಿನಕ್ಕೆ ಬದಲಿಸುವ ಕಲೆ ಮತ್ತು ಸಂಸ್ಕತಿಯ ಸೂತ್ರವಾಕ್ಯಗಳುು ಅಲ್ಲಿ ರಜಕ ಅಧಿಕಾರವನ್ನು ತಮ್ಮ ಕಹಿಮುಸ್ಕಿಯಲ್ಲಿರಿಸಬಯಸುವೃ ಬಲಾಢ್ಯವಾದ ರಾಜಕೀಯ ಪಕ್ಷವೊಂದರ ಇಚ್ಛೆಯಂತೆ ಹೇಗೆ ಬದಲಿಸು ತ್ತವೆ ಸಾಹಿತ್ಯದಲ್ಲಪ್ಪೆ? ಅಲ್ಲದೆ ಸಂಗೀತ್ಯ ಚಿತ್ರಕಲೆ ಮುಂತಾದ ಮನ:ಷ್ಯನೆ ಮನದ ಮೇಲೆ ಪರಿಣಾಮ ಮಾಡಬಲ್ಲ ಅನೇಕ ಕಲೆ ಮತ್ತು ಸಂಸ್ಕತಿಯ ಕ್ಷೇತ್ರಗಳಲ್ಲೂ ಹೊಸ ಚಳುವಳಿಗಳು ವರಿಷ್ಠರ ಅಜ್ಞೆಗನುಸಾರವಾಗಿ ಹೇಗೆ ಹುಟ್ಟಯಳಿಯುವವು ಎಂಬ ವಿಶ್ಲೇಷಣವನ್ನೂ ಮಾಡುತ್ತಿದೆ. ಅದ್ದರಿಂದ ಸೋವಿಯಟ್‌ ಯೂನಿಯನ್ಸಿನಲ್ಲಿಯ ಸಂಪ್ರದಾಯಗಳ ಪುನರಾವ್ಸಕ್ತಿಯು (Revisionism) ಏನನ್ನೂ ಸಿದ್ಧ ಮಾಡಲಾರದು.

ಮಾಕ್ಸಿ ೯ಸ್ಟರ ಅಭಿಪ್ಪಾ ್ರಾಯಕ್ಕೂ ಶೇಜವಲಕರರ ಜಭಿಪಾ ಪ್ರಿಯಕ್ಕೊ ಇರುವ ಸಾಮ್ಯದ ಕುರಿತು ನೊದಲೊಮೆ ಹೇಳಿದೆ. ‘History repeat itself’ ಎಂಬಿವೇ ಮುಂತಾದ RR ಬಟು ಪರೀಕ್ಷೆಗೆ ನಿಬಂಧ ಬರೆಯಲು ಉಪಯೋಗ ಬೀಳಬಹುದಾದ ಸುಲಭ ದೂರಾನ್ವ ಯದ ವಿಚಾರ ಗಳು ಮುಂದೆ ಕೆಲಸ ಕೈ ಬರಲಾರವು. ಹೊಸ ತಿಳಿವು ಹತಪ್ರಭವಾಗಿಲ್ಲ. ಆದರೆ ಅದರ ಅವಿಷ್ಕಾರ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಸರಿಯಾಗಿ ಇನ್ನೂ ಆಗಬೇಕಾಗಿರುವಾಗ ಮುಕ್ತಾತ್ಮಗಳು ಕೆಲವೊಮ್ಮೆ ಸಂಶಯದ ಮಡುವಿಗೆ ಸಿಲುಕಿದುದು ಕಂಡುಬಂದಲ್ಲಿ, ಅಂಧಃಕಾರ ಕವಿದಂತೆನಿಸಿದಲ್ಲಿ, ಅದರಿಂದ ನವಸೂರ್ಯನ ಬೆಳಗಿನ ಕುರಿತು ಯಾವ ಶೆಂಕೆಯನ್ನೂ ಸಡಬೇಕಾಗಿಲ್ಲ. ಇಲ್ಲಿ ರಸೆಲ್ಲರ ಒಂದು ಮಾತು ನೆನಪಾಗುತ್ತದೆ. “ಮೂಢನಿಗೆ ಯಾವಾಗಲೂ ತುಂಬ ಆತ್ಮವಿಶ್ವಾಸ; ಜಾಣನಿಗೆ ಮಾತ್ರ ಸಾಶಂಕತೆಯ ಉಪದ್ರವ ಬಹಳ.”

ವಿಭಾವರಿಯವರ ಸಾಶಂಕತೆ ಅಸಮಾಧಾನ ಎಂತಹದು, ಯಾವ ಜಾತಿಗೆ ಸೇರಿದುದು ಎಂಬುದನ್ನು ಇನ್ನೂ ಸರಿಯಾಗಿ ತಿಳಿದುನೋಡಿ,

25

ಪೂರ್ವಗ್ರಹಗಳನ್ನು ತ್ಯಜಿಸಿ ಸುಲಭ ಸಮಿಸಾಕರಣಗಳನ್ನುಳಿದು ತೂಗಿ ನೋಡುವ ಕೆಲಸ ನಡೆಯಿಲಿ.

ಲೇಖನದಲ್ಲಿ ಪ್ರಾರಂಭದಲ್ಲಿ ಹೇಳಿದ ಹೊಸದೃಸ್ಟಿ ಇನ್ನೂ ಕೆಲವು ವಿಚಾರವಂತರ ಸೊತ್ತಾಗಿ ಮಾತ್ರ ಇದೆ. ಅದು ಸಾಮಾಜಿಕ ನಡೆನುಡಿ ಗಳಲ್ಲಿ ಸೇರಿ, ಹೊಸ ಬೆಳಕುದೋರಿ, ಹೊಸ ಜೀವನದ ಹೊಸ ಆಶೆಗಳನ್ನು ಕುದುರಿಸಿದಂತೆಲ್ಲ ಅಂತಹ ಸಾಹಿತ್ಯವೂ ಬಂದೀತು. ಅಂತಹ ಆತ್ಮ ವಿಶ್ವಾಸವೂ ಸಾಹಿತ್ಯ ಕೃತಿಗಳಲ್ಲಿ ಕಂಡೀತು. ಕಳೆದ ಕೆಲವು ವರ್ಷಗಳ ಇತಿಹಾಸವನ್ನು ನೋಡಿದ ವಿಚಾರವಂತರಾರೂ ಕೇನಲ ಒಂದು ಅಸ್ಪಷ್ಟ ವಾದ ಆಶಾವಾದವನ್ನು ನಂಬಿಕೊಂಡಿರಲಾರರು. ನಮ್ಮ ಜೀವನ ಹೊಸ ದೊಂದು ಶ್ರದ್ಧೆಯನ್ನು ಕಂಡುಕೊಳ್ಳ ಬೇಕಾದರೆ, ಕೇವಲ ಮೃಗಜಲದಂತಿದ್ದ ಆದರ್ಶ ನಂಬಿಕೆಗಳು ಕೆಲಸಕ್ಕೆ ಬಾರದವೆಂಬ ಮಾತು ಸ್ಪಷ್ಟವಾಗಿದೆ. ಆದರೆ ಹೊಸ ಶ್ರಜ್ನೆ ಜೀವನಕ್ಕೆ ರೂಪುಗೊಡದ ಹೊರತು, ಆದರ ವ್ಯಾವಹಾರಿಕ ತೆಯ ಪ್ರಾತ್ಯಷೆಕ ಆತ್ಮನಿಶ್ವಾಸವನ್ನುಂಟುಮಾಡದ ಹೊರತು, ಒಡೆದ ಕನ್ನಡಿಯ ಚೂಗುಗಳಲ್ಲಿ ತನ್ನ ವಿಕೃತ ಮುಖದ ನೂರಾರು ಪ್ರತಿಬಿಂಬ ಗಳನ್ನು ಕಂಡು ವಿಕಟಿಹಾಸ್ಯ ಮಾಡುವ ಉನ್ಮಾದದ ಚಿತ್ರಣ ಪ್ರಾಮಾಣಿಕ ರಾದ ಲೇಖಕರನೇಕರ ಬರವಣಿಗೆಯಲ್ಲಿ ಕಾಣದಿರದು. ನವ ಸಮಾಜ ಕಟ್ಟುವ ಕಾರ್ಯದಲ್ಲಿ ಟೊಂಕ ಬಗ್ಗಿಸಿ ಮಣ್ಣಿನ ಬುಟ್ಟಿಗಳನ್ನು ಸಾಹಿಕಿಯು ಹೊತ್ತು ಕೊಡಬೇಕಾಗಿದೆ. ಆಗಲೇ ಅವನ ಜೀವನಕ್ಕೊಂದು ಸುಸೂತ್ರತೆ ಬಂದೀತು. ಆಲ್ಲಿಯವರೆಗೆ ತನ್ನ ಸುತ್ತಲಿನ ಸುಳ್ಳುತನ ಡಂಭಾಚಾರ, ಅಧಿಕಾರಲಾಲಸೆಗಳೆಡೆಗೆ ಬೆನ್ನು ತಿರುಗಿಸಿ " ಔದಾರ್ಯದ ಉರುಳಲ್ಲಿ' ಸಿಲುಕಿ ಬವಣೆಬಟ್ಟಿ ರಾಧಾಕೃಷ್ಣನು ತಿರುಗಿ ತನ್ನ ಮನೆಯನ್ನು ಸೇರಿ ಶಾಂತಿಯನ್ನು ಪಡೆನದಷ್ಟೇ ಆದೀತು. ಇದೇ ಮಾತನ್ನು ಮುಂಬಯಿಯ ಮೊನ್ನಿನ ಸಾಹಿತ್ಯ ಸಮ್ಮೇಲನದ ಸಾಹಿತ್ಯಗೋಸ್ಟಿಯ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಸ್ಪಷ್ಟವಾದ ಶಬ್ದಗಳಲ್ಲಿ ಮಂಡಿಸಿದ್ದಾರೆ :

ಚಕ್ರವರ್ತಿಗಳ ಛ:ಯಾನುಜೀವಿಯಾಗಿ, ನಾಯಕರ ಮನೆ ಮುಂದಿನ ನಾಯಿಯಾಗಿ, ಸಿರಿವಂತರ ಕಾವಣಿಗಳೆದುರು ಕೈಯೊಡ್ಡಿ ಬಾಳಿದೆ ಸಾಹಿಕಿಯು ನಿರ್ಭೀತನಾಗಿ ಸರ್ವತಂತ್ರನಾಗಿ ಜನತೆಯ ಪ್ರಕಿನಿಧಿಯಾಗುವ

26

ಕಾಲ ಬಂದಿದೆ. ಮನುಕುಲದ ಅಭ್ಯುದಯಕ್ಕಾಗಿ ಸಂತತ ಶ್ರಮಿಸುವ ಸ್ವಯಂಸೇವಕನಾಗುವ ಕಾಲ ಬಂದಿದೆ. ಸಾಹಿತಿಯು ಮನುಕುಲದ ಮಹಾಪ್ರಗತಿಸಥವನ್ನರಿತು ಅದರಲ್ಲಿ ಅನನ್ಯ ಶ್ರದ್ಧೆಯನ್ನು ತಾಳಬೇಕಾ ಗಿಜಿ. ಪ್ರತಕಿಗಾಮಿಸಾ ಶಕ್ತಿಗಳನ್ನು ಕೆಚ್ಚೆದೆಯಿಂದ ಎದುರಿಸಬೇಕಾಗಿದೆ?

ಎಲ್ಲ ಸಮಸ್ಯೆಗಳನ್ನು ನಮ್ಮ ವಿಚಾರವಂತರು ಕೂಲಂಕಷವಾಗಿ ಚರ್ಚಿಸಿ ಬೆಳಕುದೋರಲಿ. ನಮ್ಮ ನೆರೆಯವರೇ ಆದ ಮರಾಠಿಗರೊಡನೆ ಕಳೆದ ಕಾಲವೆಲ್ಲಕ್ಕೂ ನಾನು ಖುಣಿಯಾಗಿದ್ದೇನೆ. ಅವರಲ್ಲಿಯ ಇಂದಿನ ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ನಡೆದ ವಿಚಾರ ಮಂಥನ ಅವರ ನಿರ್ಭಯ ಸತ್ವಕ್ಕೆ, ಪ್ರಾಮಾಣಿಕ ಕೆಚ್ಚಿಗೆ ಸಾಕ್ಟಿಯಾಗಿರುವಂತೆ, ಫಲ ಪ್ರದವೂ ಅಹುದೆಂದು ನನಗೆ ತೋರುತ್ತದೆ. ಪುಸ್ತಕ ಅವರ ಸಾಹಸ ಪೂರ್ಣವಾದ ಜೀವನದ ವಿಷಯವಾಗಿ ನಮ್ಮವರಲ್ಲಿ ಹೆಚ್ಚಿನ ಕುತೂಹಲ ಆಸ್ಥೆ ಗಳನ್ನುಂಟುಮಾಡಲು ಸಹಾಯಕವಾದಲ್ಲಿ ಸಾರ್ಥಕತೆಯ ಸುಖವೊಂದು ನನ್ನದಾದೀತೆಂದು ಭಾವಿಸಿದ್ದೇನೆ.

ಸಾಂಗಲಿ, ಜುಲೈ ೧೯೫೧. ಡಿ. ಎಸ್‌. ಕುಲಕರ್ಣಿ

ಜೆಕೆ

ಸುಮಾರು ಏಳೆಂಟು ವರುಷಗಳ ಹಿಂದೆ ನಾನು ಕಾಲೇಜಿನಲ್ಲಿದ್ದಾಗ, ಇಲ್ಲಿ ಮರಾಠೀ ಭಾಷೆಯ ಸಂಪರ್ಕ ಬಂದು ಆತುರತೆಯಿಂದ ಓದಿದ ಮೊದಲಿನ ಪುಸ್ತಕಗಳಲ್ಲಿಯೇ ಪ್ರಸ್ತುತ ಕಾದಂಬರಿಯೂ ಒಂದಾಗಿದ್ದಿತು. ಮುಂಡೆ ಆಗಾಗ ಮಹಾರಾಷ್ಟ್ರದಲ್ಲಿ ಸುತ್ತಲು ನಡೆಯುತ್ತಿದ್ದ ಹೊಸ ಹೊಸ ವೈಚಾರಿಕ ಚಳುವಳಿಗಳನ್ನು ಕುರಿತು ಓದಿದಂತೆಲ್ಲ ನನಗೆ ಜನ ಮತ್ತೆ ಅವರ ಭಾಷೆ-ಸಾಹಿತ್ಯ ಇವುಗಳ ವಿಷಯಕ್ಕೆ ಉಂಟಾಗಿದ್ದ ಪ್ರೇಮಾದರೆಗಳು ಹೆಚ್ಚುತ್ತ ನಡೆದವು. ಇದೆಲ್ಲದರ ಪರಿಚಯ ನಮ್ಮ ಜನರಿಗಾಗಬೇಕು ಎಂಬ ವಿಚಾರ ಮತ್ತೆ ಮತ್ತೆ ಬರುತ್ತಿತ್ತು. ಆದರೆ ಕೆಲಸ ನನಗಾದೀತೇ? ಅದರ ವಿಸ್ತಾರದ ರೂಪರೇಖೆಗಳನ್ನಾದರೂ ಗುರುತಿಸ್ಕಿ ಅದರ ಇತ್ತೀಚಿನ ಬೆಳವಣಿಗೆಯ ವಿವಿಧವಾದ ಅಭಿವ್ಯಕ್ತಿಯ ಮುಖ್ಯಾಂಶಗಳನ್ನಾದರೂ ಗುರುತುಹಾಕಿ, ಅದರ ಪೂರ್ವಾಪರಗಳ ಮಾಲಿಕೆಯಲ್ಲಿ ಹೆಣೆದು ನೋಡಬಲ್ಲ ವಿಚಕ್ಷಣತೆ ನನ್ನಲ್ಲಿದ್ದೀತೇ?- ಎಂಬ ಪ್ರಶ್ನೆ ಯಾವಾಗಲೂ ಇದ್ದಿತು. ಆದರೂ ಕಾದಂಬರಿಯನ್ನು ಅನುವಾದಿಸಬೇಕೆಂಬ ವಿಚಾರ ಮಾತ್ರ ನನ್ನನ್ನು ಮೊದಲೇ ಗ್ರಾಸಿಸಿದ್ದಿತು. ಕೊನೆಗೊಮ್ಮೆ ಅದನ್ನು ಮಾಡಿ ಮುಗಿಸಿದೆ. ಅದರೊಡನೆ ದೀರ್ಫವಾದ ಪರಿಚಯಾತ್ಮಕ ಲೇಖನವೊಂದನು ಬರೆದು ಮುಗಿಸಿದೆ. ತಿಳಿದವರು ಶೂಗಿ ನೋಡಿ ಪರಾಂಬರಿಸಬೇಕು. ಭಾಷೆ-ಸಂಸ್ಕೃತಿಗಳ ಹದವಾದ ಬರವಣಿಗೆಯನ್ನೇ ಬಯಸುವ ಸೂಜ್ಞರು ಅನುವಾದದ ಕುರಿತಾದ ತಮ್ಮ ಅಭಿಪ್ರಾಯವನ್ನು ತಿಳಿಸಿ ನನ್ನನ್ನು ಉಸಕೃತನನ್ನಾಗಿಸಬೇಕು.

ನನ್ನೆ ಚಿಕ್ಕ ಸಾಹಸಕ್ಕೆ ಸರಿಯಾದ ರೂಪ ಕೊಟ್ಟು ಪುಸ್ತಕ ರೂಪದಲ್ಲಿ ಅದನ್ನು ವಾಚಕರೆ ಕೈಯಲ್ಲಿರಿಸಲು ನೆರವಾದ ನನ್ನ ಅನೇಕ ಹಿರಿಯರನ್ನು ಮಿತ್ರರನ್ನು ನಾನು ಇಲ್ಲಿ ನೆನೆಯದಿರಲಾಕೆ.

ಮೊದಲಿಗೆ ತಮ್ಮ ಪುಸ್ತಕವನ್ನು ಅನುವಾದಿಸಿ ಪ್ರಸಿದ್ದಿಸಲು ಅನುಮತಿ ಯಸನ್ಸಿತ್ತುದಕ್ಕಾಗಿ ಮೂಲಲೇಖಕಿಯರಾದ ಸೌ. ಮಾಲತೀಬಾಯಿ ಬೇಡೇಕರ ಅವರಿಗೆ ನನ್ನ ವಂದನೆಗಳು. ಅನೇಕ ವ್ಯಾವಹಾರಿಕ ಅಡ್ಡಿ

28

ಆತಂಕಗಳಿದ್ದರೂ ಅವರು ನಮ್ಮ ಬಿನ್ನಹಕ್ಕೆ ಮನ್ನಣೆಯಿತ್ತರು. ಅದರಂತೆಯೇ ಪುಸ್ತಕವನ್ನು ಪ್ರಸಿದ್ದಿ ಸರೊನ್ಬಿ, ಕೆಲಸವನ್ನು ನೆರವೇರಿಸಿದ ಉಷಾ ಪ್ರೆಸ್ಸಿನ ಒಡೆಯರಾದ ಶ್ರೀ ಆರ್‌. ಎನ್‌. ಹಬ್ಬು ಅವರಿಗೂ ನಾನು ವಂದನೆಗಳನ್ನ ರ್ಪಿಸುತ್ತೇನೆ.

ಪುಸ್ತಕದ ಭಾಷಾಂತರ ನಾನು ಮಾಡಿ ಮುಗಿಸಿ ಇಂದಿಗೆ ನಾಲ್ಕು ವಸರುಗಳಾದವು. ಅದನ್ನು ಪ್ರಸಿದ್ಧಿಸುವದರ ದಾರಿಯಲ್ಲಿ ಬಂದ ಅಡೆ-ಕಡೆ ಗಳು ಒಂದಲ್ಲ ಎರಡಲ್ಲ, ಲೇಖಕಿಯರ ಗುಪ್ತನಾಮದಿಂದಾಗಿ ಅವರನ್ನು ಸಮಾನಿಸುವದೇ ಕಠಿಣವಾಗಿತ್ತು. ಕೆಲಸದಲ್ಲಿ ನನಗೆ ನನ್ನೆ ಮಿತ್ರರಾದ ಪ್ರೊ. ಯಾರ್ದಿ, ಅವರ ಮಿತ್ರರೂ ಮಹಾರಾಷ್ಟ್ರದ ನುರಿತ ಲೇಖಕರೂ ಆದೆ ಮುಂಬಯಿಯ ಪ್ರೊ. ನಿ. ಎಚ್‌. ಕುಲಕರ್ಣಿ, ನಂತರ ನನ್ನ ಗುರುಗಳಾದ ಪ್ರೊ. ಜಿ. ಎಸ್‌. ದೀಕ್ಷಿತ್ಕ ಪುಣೆಯ ಇಂಟರನ್ಯಾಶನಲ್‌ ಪುಸ್ತಕಾಲಯದ ಒಡೆಯರಾದ ಶ್ರೀ ದೀಕ್ಷಿತ ಮತ್ತು ಅವರ ಪ್ರಸಿದ್ಧ ಲೇಖಕ ಪತ್ನಿ ಸೌ. ಮುಕ್ತಾಬಾಯಾ ದೀಕ್ಷಿತ ಹೀಗೆ ಅನೇಕ ಸಹೃದಯರ ಕೈಗಳ ಮಾಲೆಯನ್ನೇ ಕಟ್ಟ ಲೇಖಿಕೆಯರನ್ನು ಮುಟ್ಟಿ, ವ್ಯವಹಾರದ ಚಕ್ರವ್ಯೂಹದೊಳಗಿಂದ ಹಾಯ್ದು ಪುಸ್ತಕ ಪ್ರಸಿದ್ಧವಾಗುವವರೆಗೂ ಎಂದರೆ! ಎಂದರೇನೆಂಬು ದನ್ನು ಮುಂದೆ ವಿಚಾರ ಮಾಡುವ ಪ್ರಸಂಗವೇ ನನಗೆ ಬರಲಿಲ್ಲ. ಯಾಕೆಂದಕೆ ನನ್ನ ಗುರುಗಳಾದ ಪ್ರೊ. ಮುಗಳಿಯವರೇ ಅದನ್ನೆಲ್ಲ ಮಾಡಿ ಮುಗಿಸಿದರು. ನಂತರ ತೂಕಡಿಸುತ್ತಿದ್ದ ನನ್ನನ್ನೆ ಬ್ಬಿಸಿ ಮಮ? ಎನ್ನು ಅಂದರು. ಎಂದೆ. ಅವರಲ್ಲದಿದ್ದರೆ ನನ್ನ ಹಸ್ತಲಿಖಿತ ಹುಳತಿನ್ನುತ್ತ ಬಿದ್ದಿರಬಹುದಾಗಿತ್ತಷ್ಟೆ. ಅವರೇ ಕೃತಿಗೆ Gd 18186£. ನನಗೆ ಕಾಲೇಜಿನಲ್ಲಿ ಸಂಬಂಧ ಬಂದಾಗಿನಿಂದ ನನ್ನಲ್ಲಿ ಆಸ್ಥೆ ತೋರಿಸಿ ಅನೇಕ ವಿಧದಲ್ಲಿ ಸಹಾಯ ನೀಡಿದ ಅವರಿಗೂ, ನನ್ನ ಗುರುಗಳಾದ ಪ್ರೊ. ದೀಕ್ಷಿತ ಅವರಿಗೂ ಉಳಿದೆಲ್ಲ ಹಿರಿಯರಿಗೂ ಮಿತ್ರರಿಗೂ ನಾನು ಚರಖಣಿ.

ಪುಸ್ತಕಕ್ಕೆ ತಮ್ಮ ಹರಕೆಯನ್ನು ಸಲ್ಲಿಸಿ ಸಾಗಲಿ ಎಂದು ಮುನ್ನಡೆಸಿದ ನಮ್ಮೆಲ್ಲರಿಗೂ ಹಿರಿಯರಾದ ಬೇಂದ್ರೆಯವರಿಗೆ ನನ್ನ ಭಕ್ತಿ ಪೂರ್ವಕ ಅಭಿವಂದನೆ.

29

ಕೊನೆಯದಾಗಿ ನನ್ನ ತೀರ ಸರಿಯದ ಮಿತ್ರರೂ, ಇಲ್ಲಿಯ ನಿಲಿಂಗ್ಲನ್‌ ಕಾಲೇಜಿನಲ್ಲಿ ಇಂಗ್ಲೀಷ್‌ ಸಾಹಿತ್ಯದ ಅಧ್ಯಾಪಕರೂ ಆದ ಶ್ರೀ ಮ. ದ, ಹಾತಕಣಗಲೇಕರ ಅವರ ಬಹು ಮಹತ್ವದ ಉಸಕಾರವನ್ನು ನೆನೆಸದಿರ ಲಾಕಿ. ಅವರೊಡನೆ ಒಂದೆಡೆಗೆ ಕಳೆದ ಮೂರು ವರ್ಷಗಳಲ್ಲಿ, ನನಗೆ ಅವರು ಮರಾಠಿಯಿಂದ ಓದಿ ತೋರಿಸಿದ ವಿಷಯಗಳು ಅಸ್ಟಿಷ್ಟಲ್ಲ ಅವರೊ ಡನೆ ಆದ ಸಹವಾಸ, ಸಹವಾಚನ, ಚರ್ಚೆಗಳಿಂದ ನನಗೆ ಆಧುನಿಕ ಮರಾಠೀ ಸಾಹಿತ್ಯದ ಬಹುಮುಖತೆಯ ಪರಿಚಯ ಸ್ವಲ್ಪವಾದರೂ ಆಯಿ ತಲ್ಲಜಿ, ಅದರಿಂದ ವಿಭಾವರೀ ಶಿರೂರಕರರ, ಮರಾಠೀ ವಿಮರ್ಶಕರ ಕುರಿತು ಬರೆದ ನನ್ನ ದೀರ್ಥವಾದ ಲೇಖನಕ್ಕೆ ಅಪ್ರತ್ಯಕ್ಷವಾಗಿ ಆದೆ

ಸಹಾಯ: ಅಸ್ಟಿಷ್ಟಲ್ಲ. ಅವರಿಗೆ ನನ್ನ ಹಾರ್ದಿಕ ವಂದನೆಗಳು. ಡಿ. ಎಸ್‌. ಕುಲಕರ್ಣಿ

ನಮ್ಮ ಮಾತು

"ಜೋಕಾಲಿಯ ಮೇಲೆ? ಕಾದಂಬರಿಯೊಡನೆ ನಮ್ಮ ಐದನೆಯ ವರುಷ ಮುಗಿಯುತ್ತದೆ. ನಮ್ಮ ಹೊಸ ವರುಷ ಇದೇ ಅಕ್ಟ್ರೋಬರ್‌ದಿಂದ ಶ್ರೀ ವಿ. ಎಂ. ಇನಾಂದಾರರ " ಸ್ವರ್ಗದ ಬಾಗಿಲು ಕಾದಂಬರಿಯೊಡನೆ ಪ್ರಾರಂಭವಾಗುತ್ತದೆ.

"ಜೋಕಾಲಿಯ ಮೇಲೆ' ಕಾದಂಬರಿಯು ಮಹಾರಾಷ್ಟ್ರದಲ್ಲಿ ಹೆಸರಾದ ಲೇಖಕಿಯರಾದ ಶ್ರೀಮತಿ ಮಾಲತಿಬಾಯಿ ಬೇಡೇಕರ್‌ ಅವರ ಒಂದು ಸುಪ್ರಸಿದ್ಧ ಕಾದಂಬರಿಯ ಅನುವಾದ. ಇವರ ಲೇಖನನಾಮ ವಿಭಾವರೀ ಶಿರೂರಕರ,

ಇದನ್ನು ಆನುವಾದಿಸಿದವರು ಶ್ರೀ ಡಿ. ಎಸ್‌. ಕುಲಕರ್ಣಿಯವರು, ಇವರು ವಿಲಿಂಗ್ಲನ್‌ ಕಾಲೇಜಿನಲ್ಲಿ ಅರ್ಥಶಾಸ್ರ್ರವನ್ನೋದಿ ಬಿ.ಎ. ಆನರ್ಸ್‌ ಪಾಸಾಗಿದ್ದಾರೆ, ಎಂ ಎ. ಪರೀಕ್ಷೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಗತಿಪರ ವಾದ ಆಧುನಿಕ ವಿಚಾರಪ್ರಣಾಲಿಗಳನ್ನು ಳೆನ್ನಾಗಿ ತಿಳಿದುಕೊಂಡಿದ್ದಾರೆ. ಭಾಷಣ ಮತ್ತು ಲೇಖನದಲ್ಲಿ ಚತುರರು, ಅನ್ಯಭಾಸೆಗಳೆಲ್ಲಿ ಉತ್ತಮೋ ಶ್ರಮ ಕೃತಿಗಳನ್ನು ಕನ್ನಡಿಸಬೇಕೆಂದು ಅವರಿಗೆ ಹವ್ಯಾಸವಿಷಿ. ಸ್ವಂತ ವಾಗಿ ಸಣ್ಣ ಕತೆಗಳನ್ನೂ ಬರೆಬದ್ದಾರೆ. ಇವರು ಸಾಂಗಲಿಯ ಒಂದು ಪ್ರೌಢಶಾಲೆಯಲ್ಲಿ ಅಧ್ಯಾಸಕರು. ಕಾದಂಬರಿಯೆ ವಿಷಯವಾಗಿ ಮತ್ತು ಲೇಖಕಿಯರ ವಿಷಯವಾಗಿಯೂ ಶ್ರೀ ಕುಲಕರ್ಣಿಯವರು ಒಂದು ದೀರ್ಫ ಲೇಖನವನ್ನು ಕಾದಂಬರಿಯ ಪ್ರಾರಂಭದಲ್ಲಿ ಕೊಟ್ಟಿ ರುವದ ರಿಂದ ನಾವೆ ಅದರ ಬಗ್ಗೆ ಯಾವ ವಿಷಯವನ್ನೂ ಬರೆಯುವದು ಅನವಶ್ಯಕ.

ಕಾದಂಬರಿಯನ್ನು ನಮ್ಮ ಮಾಲೆಯಲ್ಲಿ ಪ್ರಕಟಿಸಲು ಸಹಾಯ ಮಾಡಿದ ಶ್ರೀ ರಂ. ಶ್ರೀ. ಮುಗಳಿ, ಸಾಂಗಲಿ ಅವರಿಗೆ ನಮ್ಮ ವಂದನೆಗಳು. ಇವರೇ ಶ್ರೀಮತಿ ಮಾಲತಿಬಾಯಿ ಬೇಡೇಕರ್‌ ಮತ್ತು ಶ್ರೀ ಡಿ. ಎಸ್‌. ಕುಲಕರ್ಣಿಯವರಿಗೆ ನಮ್ಮ ಮಾಲೆಯ ಪರಿಚಯ ಮಾಡಿಕೊಟ್ಟು ಅವಕಾಶವನ್ನು ಕಲ್ಪಿಸಿಕೊಟ್ಟರು. ಶ್ರೀ ಮುಗಳಿಯವರ ಮಾತಿಗೆ ಒಪಿ

31

ಕೊಂಡು ಶ್ರೀಮತಿ ಮಾಲತಿಬಾಯಿ ಬೇಡೇಕರ್‌ ಮತ್ತು ಶ್ರೀ ಡಿ. ಎಸ್‌. ಕುಲಕರ್ಣಿಯವರು ನಮ್ಮ ಮಾಲೆಗೆ ಕಾದಂಬರಿಯನ್ನು ಪ್ರಕಟಿಸಲು ಅವಕಾಶ ಕೊಟ್ಟಿದ್ದಕ್ಕೆ ನಮ್ಮ ವಂದನೆಗಳು, ಈಗ ಐದು ವರುಷದಲ್ಲಿ ನಮಗೆ ನಮ್ಮ ಬರಹಗಾರರು ಮತ್ತು ಗ್ರಾಹಕರು ತುಂಬಾ ಸಹಕಾರ ಕೊಡುತ್ತಿದ್ದಾರೆ. ಅವರಿಗೆ ಎಂದಿನಂತೆ ನಮ್ಮ ವಂದನೆಗಳು. ಇತಿ, ಪ್ರಕಾಶಕರು

ಜೋಕಾಲಿಯ ಮೇಲೆ

ಚಿಕ್ಕ ಶಾಮನನ್ನು ಮಾಣಿಕಳ ಕೈಗೆ ಕೊಟ್ಟು ಅಚಲೆ ಮನೆಗೆ ನಡೆದಳು. ಇದೇನ ಈಗಾಗಲೆ ಹೊರಟಿಯೇನು?*

“ಹೂಂ. ಇನ್ನು ಹೊರಡತೇನೆ. ಬಾಬಾ ಮನೆಗೆ ಬಂದಿರಬಹುದು ಆಗಲೆ.”

ಅವನೆ? ಅವನೆಲ್ಲಿ ಇಷ್ಟು ಬೇಗ ಮನೆಗೆ ಬಂದುದುಂಟು? ಸಂಜೆ ಯೊಳಗಾಗಿ ಇನ್ನವನು ಮನೆಗೆ ಕಿರ:ಗಿದರೆ ನನ್ನನ್ನು ಸನೇಳು! ? ಮಾಣಿಕ ಳೆಂದಳು. ಮಾತಿಗೆ ಮಾಣಿಕ ವ.ತ್ತು ಅಚಲಾ ಈರ್ವರೂ ನಕ್ಕರು. ಅದರೆ ಮಾಣಿಕಳದಕ್ಕಿಂತ ಅಚಲೆಯ ನಗೆ ಒಂದು ರೀತಿ ನಿಸ್ತೇಜವಾಗಿತ್ತು. ಅವಳು ಒಡನೆ,

ಇಲ್ಲ. ಅವನು ಬೇಗನೆ ಬರಬಹುದು. ದಿನ ನನ್ನನ್ನು ಡಾಕ್ಟರರ ಕಡೆಗೆ ಕಣ್ಣು ಶಪಾಸಿಸಲು ಕರೆದುಕೊಂಡು ಹೋಗುವವನಿದ್ದಾನೆ ಅವನು? ಎಂದಳು.

ಶಾಯಿ ನಾನು ನಿನಗೆ ಹೇಳ್ತೇನೆ ಕೇಳು -ಅವನು ಈವೊತ್ತು ಬೇಗ ಬರಲಾರ, ಇನ್ನದು ಅವನ ಲಕ್ಷದಲ್ಲಿ ಕೂಡ ಉಳಿದಿರಲಿಕ್ಸಿಲ್ಲ, ಮಾತು.”

ಮಾಣಿಕ, ನಮ್ಮ ಬಾಬಾನದು ತಂಗಿಯ ಮೇಲೆ ಎಷ್ಟು ಮಮತೆ ಎಂಬುದು ಥಿನಗೆ ಗೊತ್ತಿಲ್ಲ. ಇಂಥವನೊಬ್ಬ ಅಣ್ಣ ದೊರೆಯಬೇಕಾದರೂ ಭಾಗ್ಯದ ಮಾತು.”

ಅಹಾ! ಅವನು ಕೇವಲ ನಿನಗೊಬ್ಬಳಿಗೇ ಅಣ್ಣ;

; ನನಗೇನೂ ಅಲ್ಲವೇ ಅಲ್ಲವೆಂದು ತೋರುತ್ತದೆ!” 4

1 ಮಹಾರಾಸ್ಟ್ರದಲ್ಲಿ ಹೆಣ್ಣುಮಕ್ಕಳ ವಿಷಯದಲ್ಲಿ ಪ್ರೇಮಾದರೆಗಳನ್ನು ವ್ಯಕ್ತ ಪಡಿಸುನ ಕರೆಯ ಒಂದು ಪ್ರಕಾರ; 6 ಅಕ್ಕ? ಎಂದಂತೆ,

1

ಜೋಕಾಲಿಯ ಮೇಲೆ

“ಹೌದು. ಅನನು ನನ್ನಂತೆ ನಿನಗೂ ಅಣ್ಣನಹುದು. ಅಲ್ಲವೆಂದವ ರಾರು? ಆದರೆ ನೀನು ನಿನ್ನ ಸಂಸಾರದಲ್ಲಿ ತೀರ ಬೆಕಿತುಹೋಗಿರುವದರಿಂದ ನಿನಗದು ಕಂಡುಬರಲಾರದು-

ಮತ್ತೆ ಅನನ ಸಂಸಾರದೊಳಗೆ ಅವನಿಗೂ ತಂಗಿಯರು ಕಾಣದಾಗ ಬಹುದಲ್ಲ! ಮಾಣಿಕ ನಗುತ್ತ ಉತ್ತರಿಸಿದಳು.

ಹೂಂ. ಆದರೆ ಅದಕ್ಕಿನ್ನೂ ಕೆಲವು ಕಾಲನವಿದೆ.? ತನ್ನ ಅಣ್ಣ ತನ್ನನ್ನು ದುರ್ಲಕ್ಷಿಸುತ್ತಿ ದ್ಬಾ ನೆಂಬುದರ ಅರಿವಾಗುವದು ಕೂಡ ಕಚಕ್‌ ಸಹನವಾಗುತ್ತಿರಲಿಲ್ಲ. ಅವಳು

ಶಾಮಾ, ನಾನಿನ್ನು ಹೋಗಲೇ ಹಾಗಾದರೆ? "ಬೂ? ಹೋಗತೀನಿ, ಲ್ಲಿಂ?” ಎಂದಳು

4 ಬೂ. ಶಾಮ ಒಂಟ ಕಾಲಮೇಲೆ ಸಿದ್ಧನಾಗಿದ್ದ. ಅನನು ಕೂಡಲೆ ಲುಟು ಲುಟು ಓಡುತ್ತ ಗೂಟದ ಹತ್ತಿರ ಹೋಗಿ ಅದರ ಕೆಳಗೆ ಮುಂಗಾಲುಗಳ ಮೇಲೆ ನಿಂತು, ಮೇಲೆ ಕೈ ಮಾಡಿ " ಪೊಪ್ಪೀ' ಎನ್ನುತ್ತ ಮೇಲೆ ಟೊಪ್ಪಿಗೆಯ ಕಡೆಗೊಮ್ಮೆ, ಅಚಲೆಯ ಕಡೆಗೊಮ್ಮೆ ಬೇಡಿಕೆಯ ನೋಟದಿಂದ ನೋಡಲಾರಂಭಿಸಿದ.

4 ಕಲೆಯ ಮೇಲೆ ಟೊಸ್ಪಿಗೆ ಕೆಳಗಿನದು ಬರೇ ಕುಂಬಳಕಾಯಿ? ಅಚಲೆ ನಗುತ್ತ ನುಡಿದಳು. ಅದರೆ ಶಾಮನಿಗೋ. ತಡೆಯಲಾರದ ಅವಸರ,

ಅವಳ ಹತ್ತಿರ ಓಡುತ್ತ ಹೋಗಿ ಅವನೆಂದ,

“4 ಅಬಚೀ, ಬೂ?

ಇನ್ನ ನಾಳೆ ಹೋಗೋಣ, ಕ್ಲಂ, ಅಪ್ಪಾ.”

ಛೆ ಅನನಿಗೇತರ ನಂಬಿಕೆ. ಅವನು ಅವಳನ್ನು ಬಿಡಲೇ ಒಲ್ಲ. ಅಬಚಿ, ಮಾಮಾ, ತಂದೆ, ತಾಯಿ ಮನೆಯೊಳಗಿಂದ ಯಾರಾದರೂ " ಬೂ? ಹೊರಟಕೆಂದಕೆ ತೀರಿತು, ಅವರ ಸಂಗಡ ಸಲಿಗೆಯ ಮಾತನಾಡಿ ಅಥವಾ ಕೆಲವೇಳೆ ಹಟಿ ಹಿಡಿದು, ಅತ್ತು ಕರೆದು, ತನ್ನ ಹಕ್ಕ ನ್ನು ಪ್ರಸ್ತಾನಿಸುವದು —ಇದವನ ದಿನದೆ ಮಾತಾಗಿತ್ತು. ಬಾಬಾ ಮಾಡಾ ಇವರೆಲ್ಲಿ ಯಾರಾದರೂ ಟೊಪ್ಪಿಗೆ ಹಾಕಿಕೊಂಡ ಕೂಡಲೆ, ಅಥವಾ ಅವನ ತಾಯಿ,

ಜೋಕಾಲಿಯ ಮೇಲೆ 4

ಅಬಚೆಯೆನರಾರಾದರೊ ಸೀರೆಯ ಸೆರಗನ್ನು ಸರಿಪಡಿಸಿಕೊಂಡು ನಿಂತ ಕೂಡಲೆ "ಬೂ' ಎಂಬುದಾಗಿ ಅವನಿಗೆ ನಿಶ್ಚಿತವೆನ್ನಿಸುತ್ತಿತ್ತು. ಆದ್ದರಿಂದ ಶಾಮನ ಕಣ್ಣು ತಪ್ಪಿಸಿ ಹೋಗುವಡೆಂದರೆ ಹೋಗೋಣವೆಂದುಕೊಂಡ ಮೇಲೆ ನಿಜವಾಗಿಯೂ ಕಾಲು ಗಂಟಿಯಾದರೂ ಹತ್ತುತ್ತಿತ್ತು. ಅದರಲ್ಲಿಯೂ ಶಾಮನಿಗೆ ಅಬಚಿಯ ಎಳೆತ ವಿಶೇಷ.

ಕುಂದಾ ಯಾರವಳು?” ಶಾಯಿಯವಳು? ಮತ್ತೆ “ಶಾಮ ನ್ಯಾರವನು??.. ಅಬಚಿಯನ” ಹೀಗೆ ಅನೇಕ ಸಲ ಅನನು ತನ್ನ ಮತ್ತು ಅಬಚಿಯ ಅನ್ಯೋನ್ಯತೆಗೆ ಅವಳ ಹತ್ತಿರ ಬಾಯಿಮಾತಿನ ಸಹಿ ಹಾಕುತ್ತಿದ್ದ. ಕುಂಡೆಯ ಜನ್ಮೆವಾದಂದಿನಿಂದ ಮಾಣಿಕಳಿಗೆ ಅವಳ ಸರಿಚರ್ಯೆಯಲ್ಲಿಯೇ ಬಹಳ ವೇಳೆ ಕಳೆಯಬೇಕಾಗುತ್ತಿತ್ತು. ಇತ್ತ ಅಚಣಟಿಗೂ ಶಾಮನನ್ನು ಆಡಿಸುತ್ತ ಕೂಡ್ರುವದಕ್ಕೆ ಬೇಕಾದಷ್ಟು ವೇಳೆ ಇತ್ತು. ಅವನನ್ನು ಅಲಿಂದಿಲ್ಲಿಗೆ ಸುತ್ತಿಸುವದು, ತೂರಾಡುವದು, ಚಿಕ್ಕ ಹುಡುಗೆಯಾಗಿ ಅವನೊಡನೆ ಆಟಿವಾಡುವದು- -ಹೀಗಾಗಿ ಶಾಮನ ಕಿಡಿ ಗೇಡಿತನಕ್ಕೆ ಅಚಲೆಯ ಸಹವಾಸದಲ್ಲಿ ಬೇಕಾದಷ್ಟು ಅವಕಾಶವಿರುತ್ತಿತ್ತು. ಎರಡೂ ಹೆ:ಡುಗರನ್ನು ಸಾಕುವದರಲ್ಲಿ ಸಾಕುಬೇಕಾಗಿ ಹೋಗಿದ್ದ ಮಾಣಿಕಳಿಗೂ ಅದರಿಂದ ಒಂದು ತರಹದ ಅನುಕೂಲವೇ ಇದ್ದಿತು. ಶಾಮ ಒಂನಸಾಂದು ದಿನ ಇಡೀ ದಿವಸವೆಲ್ಲ ಅಬಚಿಯ ಹತ್ತಿರವೇ ಇದ್ದು ಬಿಡುತ್ತಿದ್ದ. ಆದರೆ ರಾತ್ರಿಯಲ್ಲಿ ಮಾತ್ರ ತಾಯಿಯ ಹತ್ತಿರ ಅವಳ ಮುಖದೆದುರು ಅಥವಾ ಅವಳ ಬೆನ್ನ ಹಿಂಜೆ ಮಲಗಿಕೊಂಡು ಕುಂಡೆಯನ್ನು ಅತ್ತ ಕಡೆಗೆ ಸರಿಸಿ ತಾಯಿ ತನ್ನ ಕಡೆಗೇ ಮುಖಮಾಡಿಕೊಂಡು ಮುಲಗಬೇಕೆಂದು ಮಾಣಿಕಳ ಹತ್ತಿರ ಹಟಿ ಹಿಡಿಯುತ್ತಿದ್ದ. ತನ್ನ ತಾಯಿಯ ಮೈಮೇಲೆ ತನ್ನ ಪುಟ್ಟ ಕೈಯನ್ಸಿರಿಸಿ ಇನ್ನು ನನಗೊಬ್ಬನಿಗೇ ಅವ್ವ. ಕುಂದಾನಿಗಲ್ಲ” ಎನ್ನುವ ಸಮಾಧಾನಾದ ಸುಖಸ್ವಪ್ನದಲ್ಲಿ ತೇಲುತ್ತ ಮಗು ನಿದ್ರೆಹೋಗುಕ್ತಿತ್ತು.

ಮಾಣಿಕಳೆಂದಳು ಹೋಗು, ಬೇಕಾದರೆ ಕರಿದುಕೊಂಡು ಹೋಗಿ ಬಿಡು, ಅವನನ್ನು. ಸಂಜೆಗೆ ತಿರುಗಿ ಕರೆತರಲು ಅವರೇ ಬರಬಹುದು.”

ಅಚಲೆಗೆ ನಡುವೆಯೇ ಒಮ್ಮ್ಮಿಂದೊಮ್ಮೆ ಏನೋ ನೆನಪಾಯಿತು. ಅಲ್ಲ ಮಾಣಿಕ. ಗುಲಾಬಿ ಹೂನನ್ನೇ ಮರೆತುಬಿಟ್ಟದ್ದೆ ನೋಡು.

ಜೋಕಾಲಿಯ ಮೇಲೆ

ಹೌದು, ಠೀನೇನಾದರೂ ಹೋಗಿದ್ದೆಯೇನು ತೋಟಿದಲ್ಲಿ? ಮೊನ್ನೆಯೇ ನಾನು ಅಲ್ಲಿ ಮೂರು ಮೊಗ್ಗೆಗಳನ್ನು ನೋಡಿದ್ದೆ. ಈಗ ಅರಳಿರಬಹುದ್ಕು ಅಲ್ಲವೆ?” ಅಚಲೆ ಆತುರದಿಂದ ತೋಟದ ಕಡೆಗೆ ನಡೆದಳು.

ಅಯ್ಯ, ಎಲ್ಲಿಯ ಗುಲಾಬಿ ಹೂ, ಏನು ಸುದ್ದಿ? ಈಗೇನೂ ಅಂತಹ ಹುರುಪೇ ಉಳಿದಿಲ್ಲ. ಹುಡುಗರನ್ನು ಹಿಡಿಯುವದರಲ್ಲಿ ಮುಖ ಮೇಲೆತ್ತಲಾಗುವದಿಲ್ಲ.”

ಹೌನೇನೋ, ಶಾಮಾ? ಅವ್ರ ನೆ ಜೀವಾ ತಿಂತೀಯೆಂಕೆ, ಹೌದೇ?” ಶಾಮ ಸೊಟ್ಟ ಮೋರೆ ಮಾಡಿ ಅಳಲಾ “4 ಆಬಚೀ, ನಾ ಬೂ.”

4 Fh ಮುಂಡೇಗೆಂಡು, ನಿಮ್ಮ ಅಬಚಿಸೆ ಮತ್ತೊ ಂದೇನೂ ಕೆಲಸವೇ ಇಲ್ಲ ಕಾಣಿಸುತ್ತದೆ? ಹೀಗೆಂದು ಹುಸಿ ಮುನಿಸನ್ನು ತೋರಿಸುತ್ತ ಅವನನ್ನೆ ಕ್ಕಿ ಬಗಲಲ್ಲಿರಿಸಿ ಮುದ್ದಿ ಕುತ್ತ ಅಚರೆ ತೋಟಿದ ಕಡೆಗೆ ನೆಡೆದಳು.

ಇನ್ನ ನಾವು ತೋಟಿದ ಕಡೆಗೆ ಹೋಗೋಣ” ಅಚಲೆ ಸಂಗಡ ಕರೆದುಕೊಂಡು ನಡೆನಿದ್ದರಿಂದ ಉಲ್ಲ ಸಿತನಾಗಿದ್ದ ಶಾಮ ಅವಳನ್ನೆ ಅನುಕರಿಸಿ, ತನ್ನ ಎಳೆಯ ಸ್ವರದಲ್ಲಿ ಮರುನ: ಡಿದ ಹೋಗುನ್ನೂ? ತನ್ನಂತೆಯೇ ಅವನು ಕೊನೆಗೆ ಸ್ಕರವೆಳೆಯುತ್ತಿದ್ದುದನ್ನು ನೋಡಿ ಆಚೆಗೆ ನಗೆ ಬಂತು. ಅವಳೆಂದಳು, ಭು ಗುಲಾಬಿ ಹೊ ಹೆರಿಯೋಣು.?

ಹಯ್ಯೋಣು.”

ಅಮೇಲೆ ಅವನನ್ನ ನನ್ಮುಶಾನುನ " ಪೊಪ್ಪಿ'ಯೊಳಗಹಾಸೋಣ”

ಹಾಕುನ್ನೂ ಗಿಳಿ ಮರಿಯಂತೆ ಶಾಮ ತೊದಲುತ್ತ ಮರುನುಡಿ ಯುತ್ತ ಲಿದ್ದ.

ಇತ್ನೋಡು, ಎಸ್ತು ಚುದದ” ಗುಲಾಬಿ ಹೂಗಳ ಕಡೆಗೆ ಪ್ರಸ ನ್ನತೆಯಿಂದೆ ನೋಡುತ್ತ ಅಚಲೆಯೆ`ಂದಳು. ಹೂಗಳ ಕಣ್ಣು ಕೋರೈಸುವ ಬಣ್ಣವನ್ನು ಕಂಡು ಶಾಮ ಕೆಳಗಿಳಿಯಲು ಧೆಡಸಡಿಸಲಾರಂಭಿಸಿದ.

ನನ್ನ.”

ನನ್ನ್ನ, ಏನು " ನನ್ನ'? ಅದಕ್ಕೆ ಕೈಹೆಚ್ಚುವ ಹಾಗಿಲ್ಲ, ಹೆಂ. ಅದಕ್ಕ ಮುಳ್ಳ ನನಪ್ಪಾ, ಖೋಡಿ, ಚುಚ್ಛ ತಾವ” ಮುಳ್ಳು ಚುಚ್ಚಿದನರಂತೆ

ಜೋಕಾಲಿಯ ಮೇಲೆ

ನಟಿಸಿ ಗುಲಾಬಿ ಹೂಗಳ ಹತ್ತಿರ ಕೈಯನ್ನು ಒಯ್ದು, ಸರ್ರನೆ ಹಿಂತೆಗೆದು ಕೊಳ್ಳುತ್ತ "ಸ್‌, ಹಾ' ಎಂದಳು.

* ಉಹೂಂ, ನನ್ನೆ.”

ಉಹೂಂ, ಉಹೂಂ, ಉಹೊಂ. ಅದನ್ನೋಡಿದಿಯೇನು, nv?” ಶಾಮನಿಗೆ ಹೊಗಳ ಮರವೆಯಾಗಬೇಕೆಂದು ಬೇರೆ ಡಿಗೆ ಅನನನ್ನು ತಿರುಗಿಸಿ ಅಚಲೆಯೆಂದಳು. ಅವಳು ಹೂಗಳ ಕಡೆಗೆ ಬೆನ್ನು ಮಾಡಿ ನಿಂತಿದ್ದಳಾದರೂ, ಶಾಮ ಅವಳ ಮಗ್ಗುಲಲ್ಲಿ ಕುಳಿತಲ್ಲಿಂದಲೆ ಮಣಿದು ಹೂಗಳ ಕಡೆಗೇ ಹೊರಳಿ ನೋಡುತ್ತ ಲಿದ್ದ.

| ನನ್ನ ಉಊ, ಊ.?

ಹೇಗಿದ್ದೀಯಂದೀ ನೀನು? ಅಚಪೆ ಅವನಿಗೊಂದು ಗೊರಟಿಗೆಯ ಹೂಸನ್ನು ಕಿತ್ತು ಕೊಟ್ಟಳು. ಸೂಡಲೆ ಅವನನು ಅದನ್ನು ಹರಿದು ಪಳಳೆ ಪಕಳೆಯನ್ನಾಗಿ ಮಾಡಿ ಸೃತತೃತ್ಯನಾದ. ಮಶಿ ತನ್ನ ಪುಟ್ಟ ಕೈಯನ್ನು ಚಾಚಿ ಗುಲುಬೀ ಹೊವನ್ನು ತೋರಿಸುತ್ತೆ ಊ? ಎಂದು ಪ್ರಾರಂಭ ಮಾಡಿದ.

4 ಕುಮಾ ಹೊವನ್ನು ಹರಿಜೊಗೆಜೆಯಹುದಲ್ಲೋ? ಇನ್ನೇನು ಹೂವು ಗೀಪು.ಇಲ್ಲ, ನಡೆ?

ಶಾಮನೆ ಆತ್ಮಸ್ರ ವೈಗೆ ೪ಬಿಂಶೆಹ ವಜ್ರಾಘ:ಶ! ಭೂಮಿಯ ಗಾಳಿಯನ್ನು ಉಸಿರಾಡಿಸಸತ್ತಿ ಎರಡೇ ವರ್ಷಗಳಾಗಿದ್ದರೂ ಶಾನು ತನ್ನ ಮನೆಯ ಅಧಿರಾಜನಾಗಿದ್ದ. ತಂದೆತಾಯಿ ಯರಷ್ಟೇೇ ಅಲ್ಲದೆ, ವ:ನೆಗೆ ಬಂದರ ಹೋಗುವವರೂ ಅವನ ಇಚ್ಛಾಶಕ್ತಿಯ ಪ:ಹಾತ್ಮ್ಯವನ್ನು ಬಲ್ಲವರಾಗಿದ್ದರು. ತನಗೆ ಬೇಕೆನಿಸಿದ ಪ್ರಕಿಯೊಂದು ವಣತನ್ನು ತನ್ನಿಷ್ಟ್ರದೇತೆ ಮಾಡಹಚ್ಚುವ ಅವನ ರೀತಿ ದುರ್ದಮ್ಯವಾದುದಾಗಿತ್ತು. ವ್ಯರ್ಥಮಗಿ ಶಬ್ದಗಳನ್ನು ವ್ಯಯಿ ಸದೆ ಎರಡೆ5ಡೇ ಅಕ್ಷರಗಳ ಶಬ್ದಗಳಲ್ಲಿ ಏನೆಲ್ಲ ಅರ್ಥವನ್ನು ತುಂಬಿ ತುಂಬಿ ತನ್ನ ತೊದಲು ಮಾತಿನಲ್ಲಿ ಪ್ರಲಪಿಸಹಕ್ಕಿದನೆಂದರೆ ಅವನ ಮಧುರ ವಾಣಿಗೆ ಎಂತಹ ಹಿರಿಯರೂ ಮರುಳಾಗಿ ಚಿಕ್ಕವರಂತಾಗುವರೆಂಬ ಸತ್ಯ ಅವನ ಅನುಭವದ ಮಾತಾಗಿತ್ತು. ಅವನ ನಗೆ, ಅವನ ಆಟ ಅವನ ಒಂದೇ ಶಬ್ದದ ವಾಕ್ಯಗಳ ಅಬೋಧೆ ಭಾಸೆ. ಇವೆಲ್ಲ ಮನೆ ಮಂದಿಯ

& ಜೋಕಾಲಿಯೆ ಮೇಲೆ

ಮನಗಳನ್ನೆಲ್ಲ ಮೋಹಜಾಲದಲ್ಲಿ ಸೆಕೆ ಹಿಡಿಯುತ್ತಿದ್ದವು. ಇಂಥದೊಂದು ವಸ್ತು ಬೇಕಾಗಿರುವಾಗ ಅವನಿಗದು ದೊರೆಯಲಾರದೆಂದರೇನು? ಅವನಿಗೆ ತನ್ನ ವ್ಯಕ್ತಿತ್ವದ ಮೇಲ್ಮೆಯನ್ನು ಹೀಗೆ ಕಾಯ್ದು ಕೊಳ್ಳ ಬೇಕೆಂಬುದು ಸರಿಯಾಗಿ ಗೊತ್ತಿತ್ತು. ಆದ್ದರಿಂದ ಅಬಚಿ ತನ್ನೆ ತಪ್ಪು ತೆಗೆಯುವದನ್ನು ನೋಡಿ ಅವನಿಗೆ ಕೋಪವೆಂಟಾಯಿತು.

“ಊೈ ಎಂದು ಪಟ್ಟುಹಿಡಿದು ಅವನು ತನ್ನ ಅನುಪಮ ಅಸ್ತ್ರ ವನ್ನುಪಯೋಗಿಸಿಯೇ ಬಿಟ್ಟಿ. ಗಲ್ಲದ ಮೇಲೆ ಕಂಬನಿಗಳುರುಳಿದವು. ಅವುಗಳ ಪ್ರಭಾನನೆಂತಹೆದೆಂಬುದು ಆವನಿಗೆ ಗೊತ್ತಿತ್ತು.

ಸಾಕಾಯಿತಸ್ಪ ಶಾಮ್ಸಾ ನಿನ್ನ ದೆಸೆಯಿಂದ” ಎನ್ನುತ್ತ ಕಡುಗೆಂಪು ಬಣ್ಣದ ದೊಡ್ಡ ದಾಸವಾಳದ ಹೂವೊಂದನ್ನು ಕೊಯ್ದು ಅವನ ಕೈಗೆ ಕೊಟ್ಟಿಳು. ಜೆಲುಗಲ್ಲಗಳ ಮೇಲೆ ಅರ್ಧ ದಾರಿಯ ವರೆಗೆ ಸಾಗಿ ಬಂದಿದ್ದ ಅಶ್ರುಗಳು ಅನುಯಾಯಿ.ಗಳಿಲ್ಲನೆ ನಿಂತಲ್ಲಿಯೇ ನಿಂತವು. ಶಾಮನ ಮುಖ ಮತ್ತು ಕಣ್ಣುಗಳಲ್ಲಿದ್ದ ಅಸಮಾಧಾನದ ಛಾಯೆ ಮಾಯವಾಗಿ ಕಿರುನಗೆಯ ತಿಳಿಬೆಳಕು ಮಿನುಗಿತು. “ಅದರ ಪಕಳೆ ಕಿತ್ತಿ ಒಗೆಯುವಹಾಗಿಲ್ಲ? ಅವಳು ಅವನ ಕಣ್ಣು ಒರೆಸುತ್ತ ಹೇಳಿದಳು.

"ಹ್ಞೂಂ.

$s ಅವ್ವನಿಗೆ ಹೊ ತೋರಿಸೋಣ, ಶಾಮಾ.”

ಅವ್ವಾ, ಊ.” ಮನದುಂಬಿದ ಸಂತಸದಿಂದ ಹೂವಿನ ಕಡೆಗೆ ನೋಡುತ್ತ, ಮುದ್ದು ಮುದ್ದು ಮಾತುಗಳನ್ನಾಡುತ್ತ ತನ್ನ ತಾಯಿಯ ಹೃದಯವನ್ನು ಸೆರೆ ಹಿಡಿಯತ್ತಲಿದ್ದ ಶಾಮನಲ್ಲಿ ಹೂವಿನ ಒಂದೊಂದೇ ಪಕಳೆಗಳನ್ನು ಮನಬಂದಂತೆ ಕಿತ್ತು ತೆಗೆದು ಅದರ ಮೇಲಿನ ತನ್ನ ಸಂಪೂರ್ಣ ಸ್ವಾಮಿತ್ವವನ್ನು ಸಿದ್ಧಗೊಳಿಸುವ ಇಚ್ಛೆಯಾಯಿತು. ಸುಂದರ ವಸ್ತುವನ್ನು ನಿಂತು ನಿರೀಕ್ಷಿಸಿ ಸುಖಪಡುವದಕ್ಕೆಂತ ಅದನ್ನು ತನ್ನದಾಗಿಯೇ ಮಾಡಿಕೊಳ್ಳುವದಲೆಲ್ಲಿ ಎಂತಹ ಆನಂದವಿಜೆ!

(ಈ ಅನುಪಮ ಸೌಂದರ್ಯರಾಶಿಯನ್ನು ನನ್ನದನ್ನಾಗಿಯೇ ಮಾಡಿ ಕೊಂಡು ಮನಸೋಕ್ತವಾಗಿ ನಾನದನ್ನು ಉಪಭೋಗಿಸಬೇಕು' ಎನ್ನುವ ಆತುರತೆ ಅದಕ್ಕಿಂತ ಸಾವಿರ ಪಾಲು ಬಲವತ್ತರವಾದ:ದು, ಅವನ ಅಬಚಿ

ಜೋಕಾಲಿಯ ಮೇಲೆ &

ಅತ್ತ ತೋಟದಲ್ಲಿಯ ಕಸರು ಕಳೆಯನ್ನು ಕಿತ್ತೊಗೆಯುತ್ತಿರುವಾಗ ಸುಂದರವಾದ ಹೂವನ್ನು ಚೂರು ಚೂರು ಮಾಡಿ ನೋಡಬೇಕೆಂಬ ಇಚ್ಛೆ ಶಾಮನ ಮನೋಲೋಕವನ್ನೆಲ್ಲ ತುಂಬಿ ಬಿಟ್ಟಿತ್ತು.

ಶಾಮಾ, ಹೂ ಹೆರಿಯಕೂಡದು.” |

ಇಯ್ಯಾ” ಎಂದೆ. ಹೂವಿನ ಒಂದೊಂದೇ ಪಕಳೆಗಳನ್ನು ಆಗಲೆ ಕಿತ್ತು ಬಿಟ್ಟಿದ್ದ, ಶಾಮ.

ತಾಯೀ!” ಅಚಲಾ ಒಮ್ಮೆಲೆ ಹಿಂದಕ್ಕೆ ನೋಡಿದಳು.

ಅಮ್ಮಮ್ಮಾ , ಸುಮ್ಮನೆ ಎಷ್ಟು ಹೆದರಿದೆ! ಚ್‌, ಜ್‌, ಶಾಮಾ, ಅಂತೂ ಹೊವನ್ನೆಲ್ಲಾ ಕಿತ್ತಾಡಿಬಿಟ್ಟಿಯಹುದಲ್ಲೋ! ಛೀ, ಛೀ. ನಿಮ್ಮ ಮಗನಂತಹ ಕೆಟ್ಟ ಹುಡುಗನೆಂದರೆ..? ಭಾವೂಸಾಹೇಬರನ್ನ ನ:ಲಕ್ಷಿಸಿ ಅಚಲೆ ನುಡಿದಳು.

ಹೂಂ. ಸ್ವಲ್ಪ ಅಬಚೆಯ ಪಾಠ ಕಲಿತಿದ್ದಾನೆ.”

ಹೌನೇನೊ/ ಟೊಣಪಾ?” ಶಾಮನೇನೂ ಉತ್ತರ ಕೊಡದೆ "ಹೊಂ--' ಎನ್ನುವಂತೆ ಗೋಣು ಅಲ್ಲಾಡಿಸಿದ. ಎರಡು ಕಾಲುಗಳನ್ನೂ ಚಾಚಿ ಕುಳಿತು ಹೂವಿನ ಪಕಳೆಗಳನ್ನು ವಿಭಜಿಸಿ ನೋಡುವ ಮಹೋದ್ಯಮ ದಲ್ಲಿ ಅವನು ಮಗ್ನನಾಗಿದ್ದ. ಉತ್ತರವನ್ನು ಕೊಡುವ ಮಟ್ಟಿಗೆ ಅವನಿ ಗೆಲ್ಲಿ ವ್ಯವಧಾನನಿರಬೇಕು?

ಭಾವೂಸಾಹೇಬ ಹಾಗಾದರೆ ನೀವಿನ್ನು ನಿಮ್ಮ ಮಗನನ್ನು ಕಕೆದುಕೊಂಡು ನಡೆಯಿರಿ, ನಾನಿನ್ನು ಹೋಗಬೇಕು.”

ಅವನೀಗ ಬೇಡ. ನನಗೆ ಬೇರೆಕಡೆ ಹೋಗಬೇಕಾಗಿದೆ.”

ಇದೇನು, ಇನ್ನೂವರೆಗೆ ಮಗನನ್ನು ಎತ್ತಿ ಕೊಳ್ಳುವದಕ್ಕೆ ನಾಚು ತ್ರೀರೋ, ಹೇಗೆ?”

“ಟ್ರಿ ನಾಟಿಕೊಳ್ಳು ನದೇನಿದೆ, ಅದರಲ್ಲಿ?

ನಿಜವಾಗಿಯೂ ಮಾಣಿಕ ನನಗೊಮ್ಮೆ ಹೇಳಿದ್ದಳು... ಶಾಮನಿನ್ನೂ ಎರಡು ತಿಂಗಳಿನ ಕೂಸು ಆಗ. ಅವಳು ತವಬಮನೆಯಲ್ಲಿಯೆ ಇದ್ದಳು. ಆಗ